ರಾಜ್ಯ'ನನಗೆ ಪ್ರಧಾನಿ ಮೋದಿಯೆಂದರೆ ಬಹಳ ಪ್ರೀತಿ, ಹೂವಿನ ಹಾರ ನೀಡುವಾಗ ಅವರ ಎಡಗೈ ಟಚ್ ಆಯ್ತು, ಅಷ್ಟು ಸಾಕು': ಹುಬ್ಬಳ್ಳಿ ಬಾಲಕ
ಪ್ರಧಾನಿ ಮೋದಿಯವರಿಗೆ ಭದ್ರತೆ ಭೇದಿಸಿ ಹೂವಿನ ಹಾರ ನೀಡಿದ ಬಾಲಕನ ಹೆಸರು ಕುನಾಲ್ ಎಸ್ ದೊಂಗ್ಡಿ ಎಂದಾಗಿದ್ದು ಈತ 6ನೇ ತರಗತಿಯಲ್ಲಿ ಓದುತ್ತಿದ್ದಾನೆ. ನಾನು ಪ್ರಧಾನಿ ಮೋದಿಯವರ ಅಪ್ಪಟ ಅಭಿಮಾನಿ, ಅವರೆಂದರೆ ಬಹಳ ಪ್ರೀತಿ, ಹೀಗಾಗಿ ನನ್ನ ಕುಟುಂಬ ಮತ್ತು ನೆಂಟರ ಜೊತೆ ಪ್ರಧಾನಿ ನೋಡಲು ಹೋಗಿದ್ದೆ.