ಹುಲಿ ವೇಷ

ಉಡುಪಿ: ಖ್ಯಾತ ಹುಲಿ ವೇಷಧಾರಿ ಅಶೋಕ್ ರಾಜ್ ಕಾಡಬೆಟ್ಟು ವಿಧಿವಶ
ಖ್ಯಾತ ಹುಲಿ ವೇಷದಾರಿ ಅಶೋಕ್ ರಾಜ್ ಅವರು ಮೃತಪಟ್ಟಿದ್ದಾರೆ. ಮಹಾನವಮಿ ಸಂದರ್ಭದ ಸಾಂಪ್ರದಾಯಿಕ ಹುಲಿ ವೇಷಕ್ಕೆ ಹೊಸ ಆಯಾಮ ನೀಡಿದ್ದ ಖ್ಯಾತ ಕಲಾವಿದರಾಗಿದ್ದ ಅವರು ಅಲ್ಪ ಕಾಲದ ಅನಾರೋಗ್ಯದಿಂದ ಮೃತರಾಗಿದ್ದಾರೆ, ಅವರಿಗೆ 56 ವರ್ಷ ವಯಸ್ಸಾಗಿತ್ತು.

ಉಡುಪಿ: ಈ ಬಾರಿಯ ಕೃಷ್ಣ ಜನ್ಮಾಷ್ಟಮಿಗೆ ಹುಲಿ ವೇಷ ಹಾಕಲಿದ್ದಾರೆ ವಿಕಲಚೇತನರು!
ಉಡುಪಿಯಲ್ಲಿ ವಿಜೃಂಭಣೆಯಿಂದ ಆಚರಿಸಲ್ಪಡುವ ಕೃಷ್ಣ ಜನ್ಮಾಷ್ಟಮಿಯು ಈ ವರ್ಷ ಆಗಸ್ಟ್ 19 ರಂದು ನಡೆಯಲಿದೆ. ಈ ವೇಳೆ ಏಳು ಮಂದಿ ವಿಕಲಚೇತನರ ತಂಡವು 'ಹುಲಿ ನೃತ್ಯ'ವನ್ನು ಪ್ರದರ್ಶಿಸುವ ಮೂಲಕ ಆಚರಣೆಗೆ ಹೆಚ್ಚಿನ ಮೆರುಗನ್ನು ನೀಡಲು ಸಿದ್ಧವಾಗಿದೆ.

ಗರುಡ ಗಮನ ವೃಷಭ ವಾಹನದಲ್ಲಿ ಹುಲಿ ಪೋಸ್ಟರ್: ಹೆಚ್ಚಿದ ಕುತೂಹಲ
ನಿರ್ದೇಶಕ, ನಟ ರಾಜ್ ಬಿ. ಶೆಟ್ಟಿ ತಮ್ಮ ಮುಂದಿನ ‘ಗರುಡ ಗಮನ ವೃಷಭ ವಾಹನ ಸಿನಿಮಾದ ಚಿತ್ರದ 2 ನೇ ಪೋಸ್ಟರ್ ಬಿಡುಗಡೆ ಮಾಡುವ ಮೂಲಕ ಸಿನಿಮಾ ಬಗ್ಗೆ ಕುತೂಹಲ ಇನ್ನಷ್ಟು ಹೆಚ್ಚಿಸಿದ್ದಾರೆ.

