ಹುಣಸೂರು

ಹುಣಸೂರು: ಹಾಡಹಗಲೇ ಬರೋಬ್ಬರಿ 5 ಕೆಜಿ ಚಿನ್ನ ದರೋಡೆ!
ಮೈಸೂರಿನಿಂದ 45 ಕಿ.ಮೀ ದೂರದಲ್ಲಿರುವ ಹುಣಸೂರಿನ ಚಿನ್ನದ ಅಂಗಡಿಯೊಂದಕ್ಕೆ ಬಂದೂಕುಗಳೊಂದಿಗೆ ಬಂದ ಐದು ಜನರ ತಂಡವು ಪಟ್ಟಣದ ಬಸ್ ನಿಲ್ದಾಣದ ಬಳಿಯಿರುವ ಆಭರಣ ಶೋ ರೂಂಗೆ ನುಗ್ಗಿ ಸುಮಾರು 5 ಕೆಜಿ ತೂಕದ ಚಿನ್ನಾಭರಣಗಳನ್ನು ದೋಚಿದೆ.

ಹುಣಸೂರು: ಅರಣ್ಯದ ಅಂಚಿನಲ್ಲಿ ತಿರುಗಾಡುತ್ತಿದ್ದ ಹುಲಿ, ನಾಲ್ಕು ಮರಿಗಳನ್ನು ಸೆರೆಹಿಡಿದ ಅರಣ್ಯ ಇಲಾಖೆ!
ಸುಮಾರು ಎರಡು ವರ್ಷಗಳ ಹಿಂದೆ ಎರಡು ವರ್ಷದ ಬಾಲಕನನ್ನು ಕೊಂದು ಹಾಕಿದ್ದ ಹುಲಿಯೇ ಇದಾಗಿದೆ ಎಂದು ನಂಬಲಾಗಿದೆ ಎಂದು ಅವರು ಹೇಳಿದರು.

ಮೈಸೂರು: ಹುಣಸೂರಿನಲ್ಲಿ ಕಲ್ಲಿನಿಂದ ಜಜ್ಜಿ ವೃದ್ಧ ದಂಪತಿಗಳ ಭೀಕರ ಹತ್ಯೆ
ಮೃತರನ್ನು ಬಿಲ್ಕೆರೆ ಹೋಬಳಿಯ ನಾಡಪ್ಪನಹಳ್ಳಿ ನಿವಾಸಿಗಳಾದ ರಂಗಸ್ವಾಮಿಗೌಡ (65) ಮತ್ತು ಅವರ ಪತ್ನಿ ಶಾಂತಮ್ಮ (52) ಎಂದು ಗುರುತಿಸಲಾಗಿದೆ.

ಹುಣಸೂರು: ಬೈಕ್'ನಲ್ಲಿ ತೆರಳುತ್ತಿದ್ದ ದಂಪತಿ ಮೇಲೆ ಚಿರತೆ ದಾಳಿ
ದ್ವಿಚಕ್ರ ವಾಹನದಲ್ಲಿ ತೆರಳುತ್ತಿದ್ದ ದಂಪತಿ ಮೇಲೆ ಚಿರತೆ ದಾಳಿ ನಡೆಸಿದ್ದು, ಪರಿಣಾಮ ಬೈಕಿನಿಂದ ಕೆಳಗೆ ಬಿದ್ದ ಮಹಿಳೆಗೆ ಗಾಯಗಳಾಗಿದ್ದು, ಪ್ರಾಣಾಪಾಯದಿಂದ ಪಾರಾಗಿರುವ ಘಟನೆ ಹುಣಸೂರು ತಾಲೂಕಿನ ಗೊಮ್ಮಟಗಿರಿ ಬೆಟ್ಟದ ರಸ್ತೆಯಲ್ಲಿ ನಡೆದಿದೆ.

ಬೈದರು ಎಂದು ಕುಡಿದ ಮತ್ತಿನಲ್ಲಿ ಮರ್ಮಾಂಗ ಕತ್ತರಿಸಿಕೊಂಡ ಭೂಪ: ಕರ್ನಾಟಕದ ಹುಣಸೂರಿನಲ್ಲಿ ಘಟನೆ!
ಮದಿರೆಯ ಮತ್ತಿನಲ್ಲಿ ವ್ಯಕ್ತಿಯೊಬ್ಬ ಮಹಾ ಎಡವಟ್ಟು ಮಾಡಿಕೊಂಡಿದ್ದು, ಮರ್ಮಾಂಗ ಕತ್ತರಿಸಿಕೊಂಡು ಪೇಚಿಗೆ ಸಿಲುಕಿದ ಘಟನೆ ಕರ್ನಾಟಕದ ಹುಣಸೂರಿನಲ್ಲಿ ನಡೆದಿದೆ.

ಜೆಡಿಎಸ್ ನಿಂದ ಮತ್ತೊಬ್ಬ ಪ್ರಭಾವಿ ನಾಯಕ ಹೊರಕ್ಕೆ: ವಿಧಾನಸಭೆ ಚುನಾವಣೆ ಸಮಯದಲ್ಲಿ ಕಾಂಗ್ರೆಸ್ ಸೇರಲಿರುವ ಜಿಟಿ ದೇವೇಗೌಡ!
ಪಂಚಾಯತ್ ಚುನಾವಣೆ ರಾಜ್ಯದಲ್ಲಿ ಸದ್ಯದಲ್ಲಿಯೇ ಇದೆ. ಇದು ಮುಂಬರುವ ವಿಧಾನಸಭೆ ಚುನಾವಣೆಗೆ ಸೆಮಿ ಫೈನಲ್ ಪಂದ್ಯದ ರೀತಿಯಲ್ಲಿ. ಈ ಸಂದರ್ಭದಲ್ಲಿ ಹಲವು ಜೆಡಿಎಸ್ ನಾಯಕರು ಕಾಂಗ್ರೆಸ್ ಸೇರಲಿದ್ದು ರಾಜಕೀಯ ಧ್ರುವೀಕರಣವಾಗಲಿದೆ ಎಂದು ಹೇಳಲಾಗುತ್ತಿದೆ.

ಹೆಣ್ಣಾಗಿದ್ದರೆ ಸಾಕಾಗುವುದಿಲ್ಲ, ತಾಯಿ ಹೃದಯ ಇರಬೇಕು: ರೋಹಿಣಿ ಸಿಂಧೂರಿ ವಿರುದ್ಧ ಶಾಸಕರ ಆಕ್ರೋಶ
ಹೆಣ್ಣಾಗಿದ್ದರೆ ಸಾಕಾಗುವುದಿಲ್ಲ. ತಾಯಿ ಹೃದಯ ಇರಬೇಕು’ ಎಂದು ಹುಣಸೂರು ಶಾಸಕ ಎಚ್.ಪಿ.ಮಂಜುನಾಥ್ ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ವಿರುದ್ಧ ಹರಿಹಾಯ್ದಿದ್ದಾರೆ.

ನಾಲ್ಕೂ ಕಂದಾಯ ವಿಭಾಗದಲ್ಲಿ ರೈತರಿಗೆ ಸಾಲ ಮೇಳ- ಸಚಿವ ಎಸ್. ಟಿ. ಸೋಮಶೇಖರ್
ಕಲಬುರಗಿ,ಬೆಳಗಾವಿ, ಬೆಂಗಳೂರು ಹಾಗೂ ಮೈಸೂರಿನ ನಾಲ್ಕು ವಿಭಾಗಗಳ ಲ್ಲಿ ಸಾಲ ಮೇಳ ಮಾಡಿ ರೈತರಿಗೆ ಮತ್ತಷ್ಟು ಅನುಕೂಲ ಮಾಡಿಕೊಡಲಾಗುವುದು ಎಂದು ಸಹಕಾರ ಮತ್ತು ಮೈ ಸೂರು ಜಿಲ್ಲಾ ಉಸ್ತುವಾರಿ ಸಚಿವರಾದ ಎಸ್.ಟಿ.ಸೋಮಶೇಖರ್ ತಿಳಿಸಿದ್ದಾರೆ.

ಹುಣಸೂರಿನಲ್ಲಿ ವಿಶ್ವನಾಥ್ ಸೋಲಿಗೆ ಯೋಗೇಶ್ವರ್ ಕಾರಣ: ಜಿ.ಟಿ ದೇವೇಗೌಡ
ಹುಣಸೂರು ಉಪ ಚುನಾವಣೆಯಲ್ಲಿ ಎಚ್ ವಿಶ್ವನಾಥ್ ಸೋಲಿಗೆ ಸಿ.ಪಿ. ಯೋಗೇಶ್ವರ್ ಕಾರಣ ಎನ್ನುವ ಮೂಲಕ ಮಾಜಿ ಸಚಿವ ಜಿ.ಟಿ.ದೇವೇಗೌಡ ಹೊಸ ಬಾಂಬ್ ಸಿಡಿಸಿದ್ದಾರೆ.

