ದೇಶಕೊಟ್ಟಾಯಂನ ಆಶ್ರಯ ಮನೆಯಿಂದ ನಾಪತ್ತೆಯಾಗಿದ್ದ 9 ಹುಡುಗಿಯರು ಆರು ಗಂಟೆಗಳ ಬಳಿಕ ಪತ್ತೆ!
ಕೇರಳದ ಕೊಟ್ಟಾಯಂ ಜಿಲ್ಲೆಯ ಮಂಗನಂ ಎಂಬಲ್ಲಿ ಖಾಸಗಿ ಆಶ್ರಯ ಮನೆಯಿಂದ (ಶೆಲ್ಟರ್ ಹೋಂ) ಒಂಬತ್ತು ಬಾಲಕಿಯರು ಸೋಮವಾರ ನಸುಕಿನಲ್ಲಿ ನಾಪತ್ತೆಯಾಗಿದ್ದಾರೆ. ಬಳಿಕ ಪೊಲೀಸರು ನಡೆಸಿದ ಹುಡುಕಾಟದಲ್ಲಿ, ಅವರು ಮಧ್ಯಾಹ್ನದ ವೇಳೆಗೆ ಪಿರವಮ್ ಬಳಿಯ ಎಲಂಜಿಯಲ್ಲಿರುವ ಕೈದಿಗಳ ಮನೆಯಲ್ಲಿ ಪತ್ತೆಯಾಗಿದ್ದಾರೆ.