ರಾಜ್ಯಕೆಂಪು ಬಟ್ಟೆ ಬೀಸುತ್ತಾ ಹಳಿ ಮೇಲೆ ಬಿದ್ದ ಮರಕ್ಕೆ ರೈಲು ಡಿಕ್ಕಿಯಾಗುವುದನ್ನು ತಪ್ಪಿಸಿದ ಮಹಿಳೆ; ಎಲ್ಲೆಡೆ ಪ್ರಶಂಸೆ
ಹೃದಯ ಶಸ್ತ್ರಚಿಕಿತ್ಸೆಗೆ ಒಳಗಾದ 70 ವರ್ಷದ ಮಹಿಳೆಯೊಬ್ಬರು ತಮ್ಮ ಮನೆಯಿಂದ 150 ಮೀಟರ್ ಓಡಿ, ಕೆಂಪು ಬಟ್ಟೆಯೊಂದನ್ನು ಬೀಸಿ ನಗರದಲ್ಲಿ ರೈಲು ಹಳಿಗಳ ಮೇಲೆ ಬಿದ್ದ ಮರಕ್ಕೆ ಎಕ್ಸ್ಪ್ರೆಸ್ ರೈಲಿನ ಡಿಕ್ಕಿಯನ್ನು ತಪ್ಪಿಸಿದರು. ಈ ಘಟನೆ ಮಾರ್ಚ್ 21 ರಂದು ನಡೆದಿದ್ದು, ಇತ್ತೀಚೆಗೆ ಬೆಳಕಿಗೆ ಬಂದಿದೆ.