ರಾಜ್ಯಕಲಬುರಗಿ: ಹಿರಿಯ ಮಹಿಳಾ ಜ್ಯೋತಿಷಿಯೊಬ್ಬರ ಹತ್ಯೆ; ಕೊಲೆಗೂ ಮುನ್ನ ಅತ್ಯಾಚಾರ ನಡೆದಿರುವ ಶಂಕೆ
ಕಲಬುರಗಿ ಜಿಲ್ಲೆಯಲ್ಲಿ ಹಿರಿಯ ಮಹಿಳಾ ಜ್ಯೋತಿಷಿಯೊಬ್ಬರನ್ನು ಕೊಚ್ಚಿ ಹತ್ಯೆ ಮಾಡಲಾಗಿದ್ದು, ಕೊಲೆ ಮಾಡುವ ಮುನ್ನ ಆಕೆಯ ಮೇಲೆ ಅತ್ಯಾಚಾರ ಎಸಗಲಾಗಿದೆ ಎಂದು ಪೊಲೀಸರು ಶಂಕಿಸಿದ್ದಾರೆ. ಸಂತ್ರಸ್ತೆಯನ್ನು 65 ವರ್ಷದ ರತ್ನಾ ಬಾಯಿ ಎಂದು ಗುರುತಿಸಲಾಗಿದ್ದು, ಮಂಗಳವಾರ ತಡರಾತ್ರಿ ಕಲಬುರಗಿ ನಗರದ ಸಂತೋಷ ಕಾಲೋನಿಯಲ್ಲಿ ಈ ಘಟನೆ ನಡೆದಿದೆ.