ಬಾಲಿವುಡ್ಹಿಂದಿ, ಮರಾಠಿ ಚಿತ್ರರಂಗದ ಹಿರಿಯ ನಟಿ ಸುಲೋಚನಾ ಲಾತ್ಕರ್ ನಿಧನ, ಪ್ರಧಾನಿ ಮೋದಿ ಸಂತಾಪ
ಹಿಂದಿ ಹಾಗೂ ಮರಾಠಿ ಚಿತ್ರರಂಗದ ಖ್ಯಾತ ಹಿರಿಯ ನಟಿಯಾಗಿದ್ದ ಸುಲೋಚನಾ ಲಾತ್ಕರ್ ನಿಧನರಾಗಿದ್ದಾರೆ.ಧೀರ್ಘ ಕಾಲದಿಂದ ಅನಾರೋಗ್ಯದಿಂದ ಬಳಲುತ್ತಿದ್ದ ಅವರು ಭಾನುವಾರ ಸಂಜೆ ಮುಂಬೈನ ಆಸ್ಪತ್ರೆಯೊಂದರಲ್ಲಿ ಕೊನೆಯುಸಿರೆಳೆದರು ಎಂದು ಅವರ ಮೊಮ್ಮಗ ಪರಾಗ್ ಅಜ್ಗಾವ್ಕರ್ ತಿಳಿಸಿದ್ದಾರೆ.