ರಾಜ್ಯ127 ಕೋಟಿ ರೂ ಮೊತ್ತದ ಐಟಿ ಹಿಂಬಾಕಿಯಿಂದ ವಿನಾಯಿತಿ ಪಡೆದ ವಿಟಿಯು
ಬೆಳಗಾವಿಯ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯಕ್ಕೆ ಬಹುದೊಡ್ಡ ಜೀವದಾನ ಸಿಕ್ಕಿದೆ. ಆರ್ಥಿಕ ಸಂಕಷ್ಟಕ್ಕೆ ಸಿಲುಕಿರುವ ಈ ವಿಶ್ವವಿದ್ಯಾಲಯ ಪಾವತಿಸಬೇಕಾಗಿದ್ದ 127 ಕೋಟಿ ರೂ. ಮೊತ್ತದ ಹಿಂಬಾಕಿ ಹಾಗೂ ಬಡ್ಡಿಗೆ ಆದಾಯ ತೆರಿಗೆ ಇಲಾಖೆ ವಿನಾಯಿತಿ ನೀಡಿದೆ.