ಕ್ರಿಕೆಟ್ಐಸಿಸಿಯ 4 ದಿನಗಳ ಟೆಸ್ಟ್ ಪಂದ್ಯದ ಚಿಂತನೆ ‘ಹಾಸ್ಯಾಸ್ಪದ ಕಲ್ಪನೆ’: ಗೌತಮ್ ಗಂಭೀರ್
ಒಂದು ದಿನ ಕಡಿತಗೊಳಿಸಿ ನಾಲ್ಕು ದಿನಗಳ ಟೆಸ್ಟ್ ಪಂದ್ಯದ ಮಾದರಿಗೆ ಪರಿಷ್ಕರಣೆ ಮಾಡಲು ಮುಂದಾಗಿರುವ ಅಂತಾರಾಷ್ಟ್ರೀ ಕ್ರಿಕೆಟ್ ಮಂಡಳಿ(ಐಸಿಸಿ) ಪ್ರಸ್ತಾಪವನ್ನು ಭಾರತ ತಂಡದ ಮಾಜಿ ಆರಂಭಿಕ ಹಾಗೂ ಹಾಲಿ ಬಿಜೆಪಿ ಸಂಸದ ಗೌತಮ್ ಗಂಭೀರ್ ವಿರೋಧಿಸಿದ್ದಾರೆ.