ವಿಶೇಷರಾಜಸ್ಥಾನ: ವರದಕ್ಷಿಣೆಗೆಂದು ಅಪ್ಪ ಕೂಡಿಟ್ಟ 75 ಲಕ್ಷ ರು. ಹಣವನ್ನು ಹಾಸ್ಟೆಲ್ ನಿರ್ಮಾಣಕ್ಕೆ ಕೊಟ್ಟು ಮಾದರಿಯಾದ ಯುವತಿ
ಹೆಣ್ಣು ಮಕ್ಕಳ ಶಿಕ್ಷಣವನ್ನು ಪ್ರೋತ್ಸಾಹಿಸುವ ಸಲುವಾಗಿ ಇತ್ತೀಚೆಗೆ ಸಪ್ತಪದಿ ತುಳಿದ ರಾಜಸ್ತಾನದ ವಧು ಅಂಜಲಿ ತನ್ನ ವರದಕ್ಷಿಣೆಗಾಗಿ ಮೀಸಲಿಟ್ಟ 75 ಲಕ್ಷ ರೂ ಮೊತ್ತವನ್ನು ಬಾಲಕಿಯರ ಹಾಸ್ಟೆಲ್ ನಿರ್ಮಾಣಕ್ಕೆ ಬಳಸಿಕೊಳ್ಳಲು ಮುಂದಾಗಿರುವ ನಡೆಗೆ ಇದೀಗ ಎಲ್ಲೆಡೆ ಭಾರಿ ಪ್ರಶಂಸೆ ವ್ಯಕ್ತವಾಗಿದೆ.