ರಾಜ್ಯಮೌಢ್ಯ ನಂಬಲ್ಲ, ದೇವರನ್ನು ನಂಬುತ್ತೇನೆ: ಹಾಸನಾಂಬೆ ದರ್ಶನ ಪಡೆದ ಸಿಎಂ ಸಿದ್ದರಾಮಯ್ಯ
ಮೌಢ್ಯ ನಂಬಲ್ಲ. ಆದರೆ, ದೇವರನ್ನು ನಂಬುತ್ತೇನೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದ್ದಾರೆ. ಹಾಸನಾಂಬೆ ದರ್ಶನ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮೌಢ್ಯ ನಿನ್ನೆ, ಮೊನ್ನೆಯದಲ್ಲ. ಮೌಢ್ಯ ಎಂದರೆ ನಂಬಿಕೆಯಲ್ಲಿ ಅಪನಂಬಿಕೆ. ಮೌಢ್ಯವನ್ನು ಹಿಂದಿನಿಂದ ಆಚರಣೆ ಮಾಡಿಕೊಂಡು ಬಂದಿದ್ದೇವೆ. ಅವುಗಳನ್ನು ನಾನು ನಂಬುವುದಿಲ್ಲ ಎಂದರು.