ಕ್ರೀಡೆಏಷ್ಯನ್ ಕುಸ್ತಿ: ಎರಡನೇ ದಿನ ಭಾರತಕ್ಕೆ ಮೂರು ಕಂಚು
ಬುಧವಾರ - ಏಷ್ಯಾ ಕುಸ್ತಿ ಚಾಂಪಿಯನ್ ಶಿಪ್ ನ ಎರಡನೇ ದಿನ ಭಾರತಕ್ಕೆ ಒಟ್ಟು ಮೂರು ಕಂಚಿನ ಪದಕ ಪ್ರಾಪ್ತಿಯಾಗಿದೆ. ಭಾರತದ ಅಶು ಮತ್ತು ಆದಿತ್ಯ ಕುಂಡು ಕ್ರಮವಾಗಿ 67 ಕೆಜಿ ಮತ್ತು 72 ಕೆಜಿ ಗ್ರೀಕೋ-ರೋಮನ್ ವಿಭಾಗಗಳಲ್ಲಿ ಕಂಚಿನ ಪದಕ ಗೆದ್ದಿದ್ದಾರೆ. ಇನ್ನು ಹರ್ದೀಪ್ (97 ಕೆಜಿ) ಸಹ ಪದಕ ಸುತ್ತಿನಲ್ಲಿ ಗೆದ್ದು ಕಂಚಿನ ಪದಕ ತಮ್ಮದಾಗಿಸಿಕೊಂಡರು.