ರಾಜ್ಯದಿ ನ್ಯೂ ಇಂಡಿಯನ್ ಎಕ್ಸ್ಪ್ರೆಸ್ ವರದಿ ಫಲಶ್ರುತಿ: ಕೊನೆಗೂ ಹನೂರು ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಬಂತು ಆಂಬ್ಯುಲೆನ್ಸ್!
ಚಾಮರಾಜನಗರ ಜಿಲ್ಲೆಯ ಹನೂರು ಪ್ರಾಥಮಿಕ ಆರೋಗ್ಯ ಕೇಂದ್ರದ (ಪಿಎಚ್ಸಿ) ಆಂಬ್ಯುಲೆನ್ಸ್ ಸೇವೆ ಸ್ಥಗಿತಗೊಂಡಿದ್ದು, ಗ್ರಾಮಸ್ಥರು ಪರದಾಡುವಂತಾಗಿತ್ತು. ಈ ಬಿಕ್ಕಟ್ಟಿನ ಕುರಿತು ನ್ಯೂ ಇಂಡಿಯನ್ ಎಕ್ಸ್ಪ್ರೆಸ್ ವರದಿ ಮಾಡಿದ ಒಂದು ದಿನದ ನಂತರ, ಜಿಲ್ಲೆಯ ಗಡಿಯಲ್ಲಿರುವ ದೂರದ ಹಳ್ಳಿಗಳು ಎದುರಿಸುತ್ತಿದ್ದ ಸವಾಲನ್ನು ಪರಿಹರಿಸಲು ಕೊನೆಗೂ ಆಂಬ್ಯುಲೆನ್ಸ್ ಅನ್ನು ಒದಗಿಸಲಾಗಿದೆ.