ಹತ್ರಾಸ್ ಕಾಲ್ತುಳಿತ

ವಿಧಿಯನ್ನು ತಪ್ಪಿಸಲು ಯಾರಿಂದಲೂ ಸಾಧ್ಯವಿಲ್ಲ, ಎಲ್ಲರೂ ಸಾಯಲೇಬೇಕು: ಹತ್ರಾಸ್ ಕಾಲ್ತುಳಿತಕ್ಕೆ ಭೋಲೆ ಬಾಬಾ
ಯಾರೂ ಏನಾಗಬೇಕೋ ಅದನ್ನು ತಪ್ಪಿಸಲು ಯಾರಿಂದಲೂ ಸಾಧ್ಯವಿಲ್ಲ ಎಂದು ಭೋಲೆ ಬಾಬಾ ತಾವು ನಡೆಸಿದ 'ಸತ್ಸಂಗ'ದಲ್ಲಿ ಸಂಭವಿಸಿದ ಕಾಲ್ತುಳಿತದಲ್ಲಿ 121 ಜನ ಸಾವನ್ನಪ್ಪಿದ ಹದಿನೈದು ದಿನಗಳ ನಂತರ ಪಿಟಿಐ ತಿಳಿಸಿದ್ದಾರೆ.

ಜನಸಂದಣಿಯಲ್ಲಿ ವಿಷಕಾರಿ ಡಬ್ಬಗಳನ್ನು ತೆರೆದು ಹತ್ರಾಸ್ ಕಾಲ್ತುಳಿತಕ್ಕೆ ಕಾರಣವಾಯಿತು: ಭೋಲೆ ಬಾಬಾ ಪರ ವಕೀಲ
ಜುಲೈ 2ರ ಹತ್ರಾಸ್ ಸತ್ಸಂಗದ ಸಂದರ್ಭದಲ್ಲಿ ಜನದಟ್ಟಣೆಯಲ್ಲಿ ವಿಷಕಾರಿ ವಸ್ತುವನ್ನು ಹೊಂದಿರುವ ಕ್ಯಾನ್‌ಗಳನ್ನು ಕೆಲವರು ತೆರೆದು ನೂಕುನುಗ್ಗಲು ಉಂಟುಮಾಡಿದರು ಎಂದು ಸಾಕ್ಷಿಗಳು ಹೇಳಿದ್ದಾರೆ ಎಂದು ಸ್ವಯಂಘೋಷಿತ ದೇವಮಾನವ ಭೋಲೆ ಬಾಬಾ ಅವರ ಪರ ವಕೀಲ ಎಪಿ ಸಿಂಗ್ ಭಾನುವಾರ ಆರೋಪಿಸಿದ್ದಾರೆ.

ತಪ್ಪಿತಸ್ಥರನ್ನು ಕ್ಷಮಿಸುವುದಿಲ್ಲ, ಸರ್ಕಾರದ ತನಿಖೆಯಲ್ಲಿ ಜನ ನಂಬಿಕೆ ಇಡಬೇಕು: ಹತ್ರಾಸ್ ಕಾಲ್ತುಳಿತದ ಬಗ್ಗೆ 'ಭೋಲೆ ಬಾಬಾ'
ತಲೆಮರೆಸಿಕೊಂಡಿರುವ ಸ್ವಯಂಘೋಷಿತ ದೇವಮಾನವ ಸೂರಜ್ ಪಾಲ್ ಸಿಂಗ್ ಅಥವಾ "ಭೋಲೆ ಬಾಬಾ", "ಅವ್ಯವಸ್ಥೆ ಸೃಷ್ಟಿಸಿದವರನ್ನು ಕ್ಷಮಿಸುವುದಿಲ್ಲ" ಎಂದು ಶನಿವಾರ ಹೇಳಿದ್ದಾರೆ.

ಹತ್ರಾಸ್ ಕಾಲ್ತುಳಿತ: ದೆಹಲಿಯಲ್ಲಿ ಪೊಲೀಸರೆದುರು ಮುಖ್ಯ ಆರೋಪಿ ಶರಣು
ಮಧುಕರ್ ಬಂಧನಕ್ಕೆ ಸಹಕಾರಿಯಾಗುವ ಮಾಹಿತಿ ನೀಡಿದವರಿಗೆ 1 ಲಕ್ಷ ರೂಪಾಯಿ ಬಹುಮಾನ ನೀಡುವುದಾಗಿ ಉತ್ತರ ಪ್ರದೇಶ ಪೊಲೀಸರು ಘೋಷಿಸಿದ್ದರು.

ಆಡಳಿತ ಕಡೆಯಿಂದ ವ್ಯವಸ್ಥೆಯಲ್ಲಿ ಲೋಪವಾಗಿದೆ: ಹತ್ರಾಸ್ ಕಾಲ್ತುಳಿತ ಸಂತ್ರಸ್ತರನ್ನು ಭೇಟಿ ಮಾಡಿದ ರಾಹುಲ್ ಗಾಂಧಿ
ಹತ್ರಾಸ್‌ನಲ್ಲಿ ಕುಟುಂಬ ಸದಸ್ಯರನ್ನು ಭೇಟಿ ಮಾಡುವ ಮೊದಲು, ರಾಹುಲ್ ಗಾಂಧಿ ಅಲಿಘರ್‌ನಲ್ಲಿ ಕೆಲಹೊತ್ತು ನಿಂತು ಜಿಲ್ಲೆಯ ಸಂತ್ರಸ್ತರ ಸಂಬಂಧಿಕರನ್ನು ಭೇಟಿ ಮಾಡಿದರು.

Hathras stampede: ಎಲ್ಲಾ ಮೃತರ ಗುರುತು ಪತ್ತೆ; ಕುಟುಂಬಸ್ಥರಿಗೆ ಹಸ್ತಾಂತರ; ಜಿಲ್ಲಾಧಿಕಾರಿ
ಹತ್ರಾಸ್‌ನಲ್ಲಿ ಸ್ವಯಂಘೋಷಿತ ದೇವಮಾನವ ಬಾಬಾ ಭೋಲೆ ಅವರ ಸತ್ಸಂಗದಲ್ಲಿ ಉಂಟಾದ ಕಾಲ್ತುಳಿತ ದುರ್ಘಟನೆಯಲ್ಲಿ ಒಟ್ಟು 121 ಜನರು ಅದರಲ್ಲೂ ಹೆಚ್ಚಿನ ಸಂಖ್ಯೆಯಲ್ಲಿ ಮಹಿಳೆಯರು, ಮಕ್ಕಳು ಮೃತಪಟ್ಟಿದ್ದರು.

ಹತ್ರಾಸ್ ಕಾಲ್ತುಳಿತದಲ್ಲಿ 121 ಸಾವು: FIR ದಾಖಲು; ಕಾಲ್ತುಳಿತಕ್ಕೆ ಜನದಟ್ಟಣೆ, ಭೋಲೆ ಬಾಬಾ ಬಾಡಿಗಾರ್ಡ್‌ಗಳು ಕಾರಣ
ಹತ್ರಾಸ್ ಸತ್ಸಂಗದ ಕಾಲ್ತುಳಿತದಲ್ಲಿ ಸಾವನ್ನಪ್ಪಿದವರ ಸಂಖ್ಯೆ 121ಕ್ಕೆ ಏರಿಕೆಯಾಗಿದೆ. ಇನ್ನು ಆಯೋಜಕರು ಸಾಕ್ಷ್ಯಗಳನ್ನು ಮರೆಮಾಚಿದ್ದಾರೆ ಮತ್ತು ಸುರಕ್ಷತಾ ಮಾನದಂಡಗಳನ್ನು ಉಲ್ಲಂಘಿಸಿದ್ದಾರೆ ಎಂದು ಪೊಲೀಸರು ಆರೋಪಿಸಿದ್ದಾರೆ.

ಹತ್ರಾಸ್ ಕಾಲ್ತುಳಿತ ಪ್ರಕರಣ: ನ್ಯಾಯಾಂಗ ತನಿಖೆಗೆ ಯೋಗಿ ಆದಿತ್ಯನಾಥ್ ಆದೇಶ
ದುರಂತಕ್ಕೆ ಯಾರು ಹೊಣೆ, ಅಥವಾ ಇದು ಪಿತೂರಿಯೇ ಎಂದು ತನಿಖಾ ಸಮಿತಿ ಪತ್ತೆ ಮಾಡುತ್ತದೆ. ಭವಿಷ್ಯದಲ್ಲಿ ಇಂತಹ ಘಟನೆಗಳು ಸಂಭವಿಸದಂತೆ ನಾವು ಖಚಿತಪಡಿಸಿಕೊಳ್ಳುತ್ತೇವೆ.

Hathras stampede: ಘಟನೆಯ ತನಿಖೆ ಮತ್ತು ಸಂತ್ರಸ್ತರಿಗೆ ಪರಿಹಾರಕ್ಕಾಗಿ ಸಮಿತಿಯನ್ನು ನೇಮಿಸಲು ಸುಪ್ರೀಂ ಕೋರ್ಟ್ ನಲ್ಲಿ PIL
ಸಾರ್ವಜನಿಕ ಸಭೆಗಳಲ್ಲಿ ಇಂತಹ ಘಟನೆಗಳನ್ನು ತಪ್ಪಿಸಲು ಮಾರ್ಗಸೂಚಿಗಳು ಮತ್ತು ಸುರಕ್ಷತಾ ಕ್ರಮಗಳನ್ನು ಸೂಚಿಸಲು ಮತ್ತು ರೂಪಿಸಲು ಸಮಿತಿಗೆ ನಿರ್ದೇಶನ ನೀಡುವಂತೆ ವಕೀಲರು ಅರ್ಜಿಯಲ್ಲಿ ಕೋರಿದ್ದಾರೆ.

