ಹಣಕಾಸು ಸಚಿವೆ

ಸರ್ಕಾರವು 9,000 ರೈತರಿಗೆ ಒಂದು ದಿನದಲ್ಲಿ ಸಾಲ ನೀಡಲಿದೆ: ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್
ಕಿಸಾನ್ ಕ್ರೆಡಿಟ್ ಕಾರ್ಡ್ ಯೋಜನೆಯಡಿಯಲ್ಲಿ ಸರ್ಕಾರವು 9,000 ರೈತರಿಗೆ ಕೇವಲ ಒಂದು ದಿನದಲ್ಲಿ ಒಟ್ಟು 1,500 ಕೋಟಿ ರೂಪಾಯಿಗಳ ಸಾಲದ ಚೆಕ್‌ಗಳನ್ನು ನೀಡಲಿದೆ ಎಂದು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಹೇಳಿದರು.

ಜಾರಿ ನಿರ್ದೇಶನಾಲಯ 'ಸಂಪೂರ್ಣವಾಗಿ ಸ್ವತಂತ್ರವಾಗಿದೆ'; ಸೇಡಿನ ಉದ್ದೇಶಕ್ಕೆ ಬಳಸಿಲ್ಲ: ನಿರ್ಮಲಾ ಸೀತಾರಾಮನ್
ಜಾರಿ ನಿರ್ದೇಶನಾಲಯವು 'ಸಂಪೂರ್ಣವಾಗಿ ಸ್ವತಂತ್ರವಾಗಿದೆ' ಎಂದು ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಹೇಳಿದ್ದು, ರಾಜಕೀಯ ಅಥವಾ ಸೇಡಿನ ಉದ್ದೇಶಗಳಿಗಾಗಿ ಸರ್ಕಾರವು ತನಿಖಾ ಸಂಸ್ಥೆಯನ್ನು ಬಳಸುತ್ತಿದೆ ಎಂಬ ಆರೋಪಗಳನ್ನು ತಳ್ಳಿಹಾಕಿದ್ದಾರೆ.

ಪಕ್ಕದ ಮನೆ ಆಂಟಿಯಂತೆ ಕಾಣುವ ನಾನು 'ದೇವರ ಆಟ' ಎಂದು ಹೇಳಿದ್ದನ್ನು ವ್ಯಂಗ್ಯ ಮಾಡುತ್ತಿದ್ದಾರೆ: ನಿರ್ಮಲಾ ಸೀತಾರಾಮನ್
ಒಬ್ಬ ಸರಳ ಹಣಕಾಸು ಸಚಿವೆ 'ಇದು ದೇವರ ಆಟ' ಎಂದು ಹೇಳಿದ ಮಾತುಗಳನ್ನು ವ್ಯಂಗ್ಯವಾಗಿ ತೆಗೆದುಕೊಳ್ಳಲಾಗಿದೆ. ಅದೇ 'ಫೋರ್ಸ್ ಮಜೂರ್' ಎಂಬ ಶಬ್ದವನ್ನು ಚೆನ್ನಾಗಿ ಸ್ವೀಕರಿಸಿದ್ದಾರೆ ಎಂದು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಹೇಳಿದ್ದಾರೆ.

ಮುಂದಿನ 5 ವರ್ಷಗಳಲ್ಲಿ 102 ಲಕ್ಷ ಕೋಟಿ ಮೂಲಸೌಕರ್ಯ ಯೋಜನೆ ಜಾರಿ: ನಿರ್ಮಲಾ ಸೀತಾರಾಮನ್
ಮೂಲಸೌಕರ್ಯ ಕ್ಷೇತ್ರದಲ್ಲಿ ಸರಕಾರದ ಖರ್ಚು ಹೆಚ್ಚಳದ ಭಾಗವಾಗಿ ಮುಂದಿನ ಐದು ವರ್ಷಗಳಲ್ಲಿ ಜಾರಿಗೆ ಬರುವಂತೆ 102 ಲಕ್ಷ ಕೋಟಿ ರೂ.ಗಳ ಮೂಲಸೌಕರ್ಯ ಯೋಜನೆಗಳನ್ನು ಹಣಕಾಸು ಸಚಿವ ನಿರ್ಮಲಾ ಸೀತಾರಾಮನ್ ಮಂಗಳವಾರ ಘೋಷಿಸಿದ್ದಾರೆ.

ಕೇಂದ್ರದಿಂದ ರಫ್ತು, ಗೃಹ ನಿರ್ಮಾಣ ಕ್ಷೇತ್ರಗಳಿಗೆ ಭರ್ಜರಿ ಘೋಷಣೆ: ಯೋಜನೆಗಳ ವಿವರ ಹೀಗಿದೆ
ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಸೆ.14 ರಂದು ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ್ದು, ತಮ್ಮ ಸಚಿವಾಲಯ ಕ್ರೆಡಿಟ್ ಔಟ್ ಫ್ಲೋ (ಸಾಲ ಕೊಡುವ ಪ್ರಕ್ರಿಯೆ) ಸುಧಾರಣೆ, ಗ್ರಾಹಕರ ವಿಶ್ವಾಸವನ್ನು ಹೆಚ್ಚಿಸುವುದಕ್ಕೆ ಕ್ರಮ ಕೈಗೊಂಡಿರುವುದಾಗಿ ಹೇಳಿದ್ದಾರೆ.

