ರಾಜಕೀಯಅನರ್ಹ ಶಾಸಕರು ಸ್ವಾತಂತ್ರ ಹೋರಾಟಗಾರರಲ್ಲ, ಆರ್.ಶಂಕರ್ ಗೆ ಬಿಜೆಪಿ ಟಿಕೆಟ್ ಬೇಡ: ಬಸವರಾಜ್ ಕೇಲಗಾರ
ಅನರ್ಹ ಶಾಸಕರೇನು ಸ್ವಾತಂತ್ರ್ಯ ಹೋರಾಟಗಾರರಲ್ಲ.ಅವರ ತ್ಯಾಗ, ಹೋರಾಟ ಎಂಬುದಿಲ್ಲ.ಅವರು ಅಧಿಕಾರದ ಆಸೆ ಇಟ್ಟುಕೊಂಡೇ ಮೈತ್ರಿ ಸರ್ಕಾರದಿಂದ ಹೊರಬಂದಿದ್ದಾರೆ. ಅವರಿಗೆ ಅಧಿಕಾರ ಕೊಡಿ, ಸಚಿವರನ್ನಾಗಿ ಮಾಡಿ, ಆದರೆ ಟಿಕೆಟ್ ನಮಗೆ ಕೊಡಿ ಎಂದು ರಾಣೆ ಬೆನ್ನೂರು ಕ್ಷೇತ್ರದ ಬಿಜೆಪಿ ಟಿಕೆಟ್ ಆಕಾಂಕ್ಷಿ ಬಸವರಾಜ ಕೇಲಗಾರ ಪಕ್ಷಕ್ಕೆ ನಾಯಕರಿಗೆ ಎಚ್ಚರಿಕೆ ನೀಡಿದ್ದಾರೆ.