ಸ್ಯಾಂಡಲ್ ವುಡ್ ಡ್ರಗ್ಸ್ ಪ್ರಕರಣ

ಸ್ಯಾಂಡಲ್ ವುಡ್ ಡ್ರಗ್ಸ್ ಪ್ರಕರಣ: ಜಾಮೀನಿಗಾಗಿ ಸುಪ್ರೀಂ ಕೋರ್ಟ್ ಕದ ತಟ್ಟಿದ ರಾಗಿಣಿ ದ್ವಿವೇದಿ
ಸ್ಯಾಂಡಲ್ ವುಡ್ ಡ್ರಗ್ಸ್ ಪ್ರಕರಣದಲ್ಲಿ ಬಂಧಿಗಳಾಗಿರುವ ನಟಿ ರಾಗಿಣಿ ದ್ವಿವೇದಿ ಹಾಗೂ ಸಂಜನಾ ಗಲ್ರಾನಿ ಜಾಮೀನಿಗಾಗಿ ವಿಧ ವಿಧದಲ್ಲಿ ಪ್ರಯತ್ನ ನಡೆಸಿದ್ದರೂ ಇದುವರೆಗೂ ಯಶ ಕಂಡಿಲ್ಲ, ಇದೇ ಕಾರಣದಿಂದ ನಟಿ ರಾಗಿಣಿ ಇದೀಗ ಜಾಮೀನು ಕೋರಿ ಸುಪ್ರೀಂ ಕೋರ್ಟ್ ಕದ ತಟ್ಟಿದ್ದಾರೆ.

ಸ್ಯಾಂಡಲ್ ವುಡ್ ನಟಿಯರನ್ನು ಬಿಡುಗಡೆಗೊಳಿಸುವಂತೆ ನ್ಯಾಯಾಧೀಶರಿಗೆ ಬೆದರಿಕೆ ಪತ್ರ: ಇಬ್ಬರ ಬಂಧನ
ಡ್ರಗ್ ಕೇಸಿನಲ್ಲಿ ಜೈಲಿನಲ್ಲಿರುವ ಇಬ್ಬರು ಸ್ಯಾಂಡಲ್ ವುಡ್ ನಟಿಯರನ್ನು ತಕ್ಷಣ ಬಿಡುಗಡೆಗೊಳಿಸಬೇಕೆಂದು ನ್ಯಾಯಾಧೀಶರಿಗೆ ಬೆದರಿಕೆ ಪತ್ರ ಬರೆದಿದ್ದ ಪ್ರಕರಣಕ್ಕೆ ಸಂಬಂಧ ಪೋಲೀಸರು ಇಬ್ಬರನ್ನು ಬಂಧಿಸಿದ್ದಾರೆ.

ಮತ್ತೆ ಕರೆದರೆ ಬರುತ್ತೇನೆ, ಸಿಸಿಬಿ ತನಿಖೆಗೆ ಸಹಕರಿಸುತ್ತೇನೆ: ದಿಗಂತ್
ಸ್ಯಾಂಡಲ್ ವುಡ್ ನಲ್ಲಿ ಮಾದಕ ನಶೆಯ ನಂಟು ಪ್ರಕರಣಕ್ಕೆ ಸಂಬಂಧಿಸಿ, ನಟ ದಿಗಂತ್ ಎರಡನೇ ಬಾರಿ ಸಿಸಿಬಿ ವಿಚಾರಣೆ ಎದುರಿಸಿದ್ದಾರೆ.

ಜಾಮೀನು ಅರ್ಜಿ ವಿಚಾರಣೆ ಮುಂದೂಡಿಕೆ: ರಾಗಿಣಿ, ಸಂಜನಾಗೆ ಇನ್ನೆರಡು ದಿನ ಜೈಲೇ ಗತಿ
ಸ್ಯಾಂಡಲ್ ವುಡ್ ನಲ್ಲಿ ನಶೆಯ ಜಾಲಕ್ಕೆ ಸಂಬಂಧಿಸಿ ನ್ಯಾಯಾಂಗ ಬಂಧನದಲ್ಲಿರುವ ನಟಿ ರಾಗಿಣಿ ದ್ವಿವೇದಿ ಹಾಗೂ ಸಂಜನಾ ಗಲ್ರಾನಿಗೆ ಇನ್ನೂ ಎರಡು ದಿನ ಜೈಲೇ ಗತಿಯಾಗಿದೆ.

ಡ್ರಗ್ಸ್ ಜಾಲ: ಬೆಂಗಳೂರಿನಲ್ಲಿ ಮುಂದುವರೆದ ಸಿಸಿಬಿ ದಾಳಿ, 44 ಲಕ್ಷ ಮೌಲ್ಯದ ಡ್ರಗ್ಸ್ ಪತ್ತೆ, ಬೆಳಗಾವಿ, ಚಿತ್ರದುರ್ಗದಲ್ಲಿ ದಾಳಿ
ಸ್ಯಾಂಡಲ್ ವುಡ್ ಡ್ರಗ್ಸ್ ಜಾಲಕ್ಕೆ ಸಂಬಂಧಿಸಿದಂತೆ ಸಿಸಿಬಿ ಪೊಲೀಸರ ದಾಳಿ ಮುಂದುವರೆದಿದ್ದು, ನಿನ್ನೆ ಮತ್ತೆ 44 ಲಕ್ಷ ಮೌಲ್ಯದ ಮಾದಕವಸ್ತುಗಳನ್ನು ಅಧಿಕಾರಿಗಳು ವಶಪಡಿಸಿಕೊಂಡಿದ್ದಾರೆ.

