ರಾಜ್ಯನವೆಂಬರ್ ಅಂತ್ಯದೊಳಗೆ ರಸ್ತೆಗಳ ಗುಂಡಿ ಮುಚ್ಚಿ, ಇಲ್ಲವಾದರೆ ಕಡ್ಡಾಯ ರಜೆ ಮೇಲೆ ತೆರಳಿ: ಡಿಸಿಎಂ ಕಾರಜೋಳ
ಲೋಕೋಪಯೋಗಿ ಇಲಾಖೆ ವ್ಯಾಪ್ತಿಯ ಎಲ್ಲಾ ರಸ್ತೆಗಳ ಗುಂಡಿ ಮಚ್ಚುವ ಕೆಲಸವನ್ನು ನವೆಂಬರ್ 30 ರೊಳಗೆ ಪೂರ್ಣಗೊಳಿಸಬೇಕು. ಇಲ್ಲದಿದ್ದರೆ ಸಂಬಂಧಿಸಿದ ಇಂಜಿನಿಯರ್ಗಳ ಕಾರ್ಯನಿರ್ವಹಣಾ ವರದಿ( ಸಿಆರ್) ಯಲ್ಲಿ ಅವರ ಅಸಮರ್ಥ್ಯತೆ ಕುರಿತು ನಮೂದಿಸಿ ಕಡ್ಡಾಯ ರಜೆ ಮೇಲೆ ಕಳುಹಿಸಲಾಗುವುದು ಎಂದು ಉಪಮುಖ್ಯಮಂತ್ರಿ ಗೋವಿಂದ ಎಂ. ಕಾರಜೋಳ ಅವರು ಸೂಚಿಸಿದ್ದಾರೆ.