ರಾಜ್ಯ'ಸ್ಟಾಪ್ ಟೊಬ್ಯಾಕೋ' ಮೊಬೈಲ್ ಆ್ಯಪ್ ಬಿಡುಗಡೆ: ಸಾರ್ವಜನಿಕ ಸ್ಥಳಗಳಲ್ಲಿ ಧೂಮಪಾನ ಮಾಡುವವರ ವಿರುದ್ಧ ದೂರು ನೀಡಲು ವೇದಿಕೆ ಸೃಷ್ಟಿ!
ಸಾರ್ವಜನಿಕ ಸ್ಥಳಗಳಲ್ಲಿ ಧೂಮಪಾನಕ್ಕೆ ನಿಷೇಧ ಹೇರಿದ್ದರೂ, ಸಾಕಷ್ಟು ನಿಯಮಗಳನ್ನು ಉಲ್ಲಂಘನೆ ಮಾಡುತ್ತಿರುವುದು ಪ್ರತಿನಿತ್ಯ ಕಂಡು ಬರುತ್ತಲೇ ಇರುತ್ತದೆ. ನಿಯಮ ಉಲ್ಲಂಘಿಸುತ್ತಿರುವುದು ಕಂಡು ಬಂದರೂ ದೂರು ನೀಡಲು ಸಾಧ್ಯವಾಗದ ಕಾರಣ ಇಷ್ಟು ದಿನ ಮೂಕ ಪ್ರೇಕ್ಷಕರಂತಿರಬೇಕಾಗಿತ್ತು. ಆದರೆ, ಇದೀಗ ದೂರ ನೀಡಲು ಸರ್ಕಾರ ವೇದಿಕೆಯೊಂದನ್ನು ಕಲ್ಪಿಸಿದೆ.