ದೇಶಜಿ 20 ಶೃಂಗಸಭೆ ಮುಗಿದ ನಂತರವೂ ಸೌದಿ ರಾಜಕುಮಾರ ನವದೆಹಲಿಯಲ್ಲಿಯೇ ತಂಗಿದ್ದು ಏತಕ್ಕೆ?
ಭಾರತ ಯಶಸ್ವಿಯಾಗಿ ಆಯೋಜಿಸಿದ್ದ ಜಿ 20 ಶೃಂಗಸಭೆ ನಿನ್ನೆ ಮಧ್ಯಾಹ್ನ ಮುಗಿದ ನಂತರವೂ ನವದೆಹಲಿಯಲ್ಲಿ ಉಳಿದುಕೊಂಡಿರುವ ಕೆಲವೇ ರಾಷ್ಟ್ರಗಳ ಮುಖ್ಯಸ್ಥರಲ್ಲಿ ಸೌದಿ ಅರೇಬಿಯಾ ರಾಜ ಮೊಹಮ್ಮದ್ ಬಿನ್ ಸಲ್ಮಾನ್ ಅಲ್ ಸೌದ್ ಕೂಡಾ ಒಬ್ಬರಾಗಿದ್ದಾರೆ. ಅವರಿಂದು ಪ್ರಧಾನಿ ನರೇಂದ್ರ ಮೋದಿ ಅವರೊಂದಿಗೆ ದ್ವಿಪಕ್ಷೀಯ ಸಭೆ ನಡೆಸಿದರು.