ವಿದೇಶಸೌದಿ ಅರೇಬಿಯಾದಲ್ಲಿ ಭೀಕರ ಅಪಘಾತ: ಉದ್ಯೋಗ ಅರಸಿ ಹೋಗಿದ್ದ ತೆಲಂಗಾಣದ ವ್ಯಕ್ತಿ ಸೇರಿ 9 ಭಾರತೀಯರ ದುರ್ಮರಣ
ಸೌದಿ ಅರೇಬಿಯಾದ ಪಶ್ಚಿಮ ಪ್ರದೇಶದ ಜೆಡ್ಡಾ ಬಳಿ ನಡೆದ ಭೀಕರ ರಸ್ತೆ ಅಪಘಾತದಲ್ಲಿ 9 ಭಾರತೀಯ ನಾಗರಿಕರು ಸೇರಿದಂತೆ 15 ಜನರು ದುರಂತ ಸಾವನ್ನಪ್ಪಿದ್ದಾರೆ. ಈ ಅಪಘಾತದಲ್ಲಿ ನೇಪಾಳ ಮತ್ತು ಘಾನಾದ ತಲಾ ಮೂವರು ನಾಗರಿಕರು ಪ್ರಾಣ ಕಳೆದುಕೊಂಡಿದ್ದಾರೆ.