ರಾಜ್ಯರಾಹುಲ್ ಗಾಂಧಿ ಅಭಿಮಾನಿಯಾಗಿ ಇಂದು ಇಲ್ಲಿಗೆ ಬಂದಿದ್ದೇನೆ, ಭಾರತ್ ಜೋಡೋ ಯಾತ್ರೆ ನನಗೆ ಸ್ಫೂರ್ತಿ ನೀಡಿತು: ನಟ ಶಿವರಾಜ್ ಕುಮಾರ್
ಇಂದು ಮಂಗಳವಾರ ಶಿವಮೊಗ್ಗ ಜಿಲ್ಲೆಯ ಸೊರಬ ಕ್ಷೇತ್ರಕ್ಕೆ ಕೈ ಅಭ್ಯರ್ಥಿ ಮಧು ಬಂಗಾರಪ್ಪ ಪರ ಪ್ರಚಾರ ನಡೆಸಲು ರಾಹುಲ್ ಗಾಂಧಿ ಆಗಮಿಸಿದ್ದರು. ಈ ವೇಳೆ ಇತ್ತೀಚೆಗಷ್ಟೆ ಕಾಂಗ್ರೆಸ್ ಸೇರಿದ್ದ ಗೀತಾ ಶಿವರಾಜ್ ಕುಮಾರ್ ಮತ್ತು ಕನ್ನಡದ ಜನಪ್ರಿಯ ನಟ ಶಿವರಾಜ್ ಕುಮಾರ್ ಕಾಂಗ್ರೆಸ್ ಪರ ಪ್ರಚಾರಕ್ಕೆ ಆಗಮಿಸಿದ್ದರು.