ವಿದೇಶಸೊಮಾಲಿಯಾದಲ್ಲಿ ಭೀಕರ ಕಾರು ಬಾಂಬ್ ಸ್ಫೋಟ: ಕನಿಷ್ಠ 100 ಸಾವು, 300 ಜನರಿಗೆ ಗಾಯ
ಸೊಮಾಲಿಯಾದ ರಾಜಧಾನಿಯ ಜನನಿಬಿಡ ಜಂಕ್ಷನ್ನಲ್ಲಿ ಶನಿವಾರ ನಡೆದ ಎರಡು ಕಾರು ಬಾಂಬ್ ಸ್ಫೋಟಗಳಲ್ಲಿ ಕನಿಷ್ಠ 100 ಜನರು ಮೃತಪಟ್ಟಿದ್ದಾರೆ. ಭೀಕರ ದಾಳಿಯಿಂದಾಗಿ ಸಾವಿನ ಸಂಖ್ಯೆ ಇನ್ನಷ್ಟು ಹೆಚ್ಚಾಗುವ ಸಾಧ್ಯತೆ ಇದೆ ಎಂದು ಸೊಮಾಲಿಯಾದ ಅಧ್ಯಕ್ಷ ಹಸನ್ ಶೇಖ್ ಮೊಹಮ್ಮದ್ ತಿಳಿಸಿದ್ದಾರೆ.