ಸೈಕಲ್ ಜಾಥಾ

ಪೆಟ್ರೋಲ್-ಡಿಸೇಲ್ ಬೆಲೆ ಏರಿಕೆ ಖಂಡಿಸಿ ಸೈಕಲ್ ಜಾಥಾ: ಬಿಜೆಪಿ ನಾಯಕರನ್ನು ವಶಕ್ಕೆ ಪಡೆದ ಪೊಲೀಸರು!
ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆ ಖಂಡಿಸಿ ಬಿಜೆಪಿ ಕೇಂದ್ರ ಕಚೇರಿ ಜಗನ್ನಾಥ ಭವನದಿಂದ ವಿಧಾನಸೌಧಕ್ಕೆ ಸೈಕಲ್ ಜಾಥಾ ಹೊರಟಿದ್ದ ಬಿಜೆಪಿ ನಾಯಕರನ್ನು ಪೊಲೀಸರು ವಶಕ್ಕೆ ಪಡೆದ ಘಟನೆ ಇಂದು ಬೆಳಗ್ಗೆ ಬೆಂಗಳೂರಿನಲ್ಲಿ ನಡೆದಿದೆ.

'ಅಪ್ಪುಗೆ ಸೈಕಲ್ ರೈಡ್ ಅಂದರೆ ಇಷ್ಟವಾಗಿತ್ತು, ನನ್ನ ಹುಟ್ಟುಹಬ್ಬಕ್ಕೆ ಸೈಕಲ್ ಗಿಫ್ಟ್ ಮಾಡಿದ್ದ': ಜಾಥಾಕ್ಕೆ ಚಾಲನೆ ನೀಡಿ ಸ್ಮರಿಸಿಕೊಂಡ ನಟ ಶಿವರಾಜ್ ಕುಮಾರ್
ನಟ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅಭಿಮಾನಿಗಳ ಪಾಲಿನ ಅಪ್ಪು ಅಗಲಿ ಇಂದು ಭಾನುವಾರಕ್ಕೆ 23 ದಿನ. ಪುನೀತ್ ರಾಜ್ ಕುಮಾರ್ ಅವರಿಗೆ ಸೈಕಲ್ ಪ್ರಯಾಣ ಎಂದರೆ ಅಚ್ಚುಮೆಚ್ಚು. ಬಿಡುವಿದ್ದಾಗ ಕಿಲೋಮೀಟರ್ ಗಟ್ಟಲೆ ಒಬ್ಬನೇ ಇಲ್ಲವೇ ಸ್ನೇಹಿತರ ಜೊತೆ ಸೈಕಲ್ ನಲ್ಲಿ ಸವಾರಿ ಹೋಗುತ್ತಿದ್ದರಂತೆ.

ಬೆಂಗಳೂರು: ತೈಲ ದರ, ಅಗತ್ಯ ವಸ್ತುಗಳ ಬೆಲೆ ಏರಿಕೆ ಖಂಡಿಸಿ ಕಾಂಗ್ರೆಸ್ ಸೈಕಲ್ ಜಾಥಾ
ಕೇಂದ್ರ ಸರ್ಕಾರದ ನಿರಂತರ ಇಂಧನ ಬೆಲೆ ಹೆಚ್ಚಳ ಹಾಗೂ ತತ್ಪರಿಣಾಮವಾಗಿ ದಿನಬಳಕೆ ವಸ್ತುಗಳ ದರ ಏರಿಕೆ ಖಂಡಿಸಿ ರಾಜ್ಯ ಕಾಂಗ್ರೆಸ್ ವತಿಯಿಂದ ಇಂದು ನಗರದಲ್ಲಿ ಸೈಕಲ್ ಜಾಥಾ ನಡೆಸಲಾಯಿತು.

ಬೆಳ್ಳಂಬೆಳಗ್ಗೆ ಸೈಕಲ್ ಏರಿದ ಸಿಎಂ ಬೊಮ್ಮಾಯಿ:'ಚೀರ್ ಫಾರ್ ಇಂಡಿಯಾ' ಸೈಕಲ್ ಜಾಥಾಕ್ಕೆ ಚಾಲನೆ
ರಾಜಕೀಯ ನಾಯಕರೆಂದರೆ ಬಿಳಿ ಶರ್ಟ್, ಪಂಜೆ, ಪೈಜಾಮ, ಪ್ಯಾಂಟ್ ಧರಿಸಿಕೊಂಡು ಓಡಾಡುವುದು ಸಾಮಾನ್ಯ ಸಂಗತಿ. ನಾಡಿನ ಮುಖ್ಯಮಂತ್ರಿಯಾಗಿ ದೆಹಲಿಗೆ ಹೋಗಿ ವರಿಷ್ಠರನ್ನು ಭೇಟಿ ಮಾಡಿ ಬಂದ ಮುಖ್ಯಮಂತ್ರಿ ಭಾನುವಾರ ಬೆಳ್ಳಂಬೆಳಗ್ಗೆ ಪ್ಯಾಂಟ್ ಟೀ ಶರ್ಟ್ ಧರಿಸಿ ಸೈಕಲ್ ಏರಿದ್ದಾರೆ.

ಸಿಎಎ, ಎನ್ ಆರ್ ಸಿ ಮತ್ತು ಎನ್ ಪಿಆರ್ ವಿರುದ್ಧ ಸೈಕಲ್ ಜಾಥಾ: ಅಖಿಲೇಶ್ ಚಾಲನೆ
ಪೌರತ್ವ ತಿದ್ದುಪಡಿ ಕಾಯ್ದೆ, ರಾಷ್ಟ್ರೀಯ ಪೌರತ್ವ ನೋಂದಣಿ ಹಾಗೂ ರಾಷ್ಟ್ರೀಯ ಜನಸಂಖ್ಯಾ ನೋಂದಣಿ ವಿರುದ್ಧ ಸಮಾಜವಾದಿ ಶಾಸಕರು ಪಕ್ಷದ ಕಚೇರಿಯಿಂದ ವಿಧಾನಸಭೆಯವರೆಗೂ ಹಮ್ಮಿಕೊಂಡಿದ್ದ ಸೈಕಲ್ ಜಾಥಾಕ್ಕೆ ಎಸ್ ಪಿ ರಾಷ್ಟ್ರೀಯ ಅಧ್ಯಕ್ಷ ಅಖಿಲೇಶ್ ಯಾದವ್ ಇಂದು ಚಾಲನೆ ನೀಡಿದರು.

ವಿಜಯಪುರ: ಸೈನ್ಯ ಸೇರಲು ಪ್ರೇರಣೆ, ಸೈನಿಕ ಶಾಲೆ ಶಿಕ್ಷಕನಿಂದ ಸೈಕಲ್ ಜಾಥಾ
ಸೈನ್ಯ ಸೇರುವಂತೆ ಯುವಕರಿಗೆ ಪ್ರೇರಣೆ ನೀಡುವ ಸಲುವಾಗಿ ವಿಜಯಪುರದ ಸೈನಿಕ ಶಾಲೆಯ ಪ್ರಾಚಾರ್ಯ ಕರ್ನಲ್ ತಮೋಜಿತ್ ಬಿಸ್ವಾಸ್ 700 ಕಿಮೀ ನಷ್ಟು ದೀರ್ಘ ಸೈಕಲ್ ಜಾಥಾವನ್ನು ಹಮ್ಮಿಕೊಂಡಿದ್ದಾರೆ.

