ಜೀವನಶೈಲಿಕೊರೋನಾ ಸಾಂಕ್ರಾಮಿಕ ಸಂದರ್ಭದಲ್ಲಿ ಮನುಷ್ಯನ ದೇಹಕ್ಕೆ ವಿಟಮಿನ್ 'ಡಿ' ಎಷ್ಟು ಮುಖ್ಯ? ನೀವು ತಿಳಿದುಕೊಳ್ಳಲೇಬೇಕಾದ ಮಾಹಿತಿ ಇಲ್ಲಿದೆ...
ಮಾನವನ ದೇಹದ ಸರಿಯಾದ ಬೆಳವಣಿಗೆಗೆ ವಿಟಮಿನ್ ಡಿ ಬಹಳ ಮುಖ್ಯ. ನಮ್ಮ ದೇಹ ಆರೋಗ್ಯಕರವಾಗಿರಲು ವಿಟಮಿನ್ ಡಿ ಅಗತ್ಯವಿರುವ ಪೌಷ್ಟಿಕತೆಗಳಲ್ಲಿ ಒಂದಾಗಿದೆ. ದೇಹದ ಆಂತರಿಕ ಕಾರ್ಯದಲ್ಲಿ ಈ ಜೀವಸತ್ವ ಬಹಳ ಮುಖ್ಯ ಕಾರ್ಯನಿರ್ವಹಿಸುತ್ತದೆ. ಕ್ಯಾಲ್ಸಿಯಂನಂತೆಯೇ ವಿಟಮಿನ್ ಡಿ ಕೂಡ ಮೂಳೆಗಳು ಹಾಗೂ ಹಲ್ಲುಗಳನ್ನು ಬಲವಾಗಿರುವಂತೆ ನೋಡಿಕೊಳ್ಳುತ್ತದೆ.