ದೇಶಆಗಸ್ಟಾ ವೆಸ್ಟ್ ಲ್ಯಾಂಡ್ ಪ್ರಕರಣ: ಎಸ್ ಜಿ ಅಂದ್ರೆ ಸುಶೇನ್ ಗುಪ್ತಾ, ಸೋನಿಯಾ ಗಾಂಧಿ ಅಲ್ಲ- ಇಡಿ ಸ್ಪಷ್ಟನೆ
ಸುಮಾರು 3,700 ಕೋಟಿ ರೂ. ಮೊತ್ತದ ಆಗಸ್ಟಾ ವೆಸ್ಟ್ ಲ್ಯಾಂಡ್ ಹೆಲಿಕಾಪ್ಟರ್ ಡೀಲ್ ಪ್ರಕರಣದಲ್ಲಿ ಕೆಲವು ಶಂಕಿತರ ನಡುವೆ ವಿನಿಮಯವಾಗಿರುವ ಅನೇಕ ಇಮೇಲ್ ಮತ್ತು ದಾಖಲೆಗಳಲ್ಲಿ ಬಳಸಲಾಗಿರುವ ಎಸ್ ಜಿ ಅಂದ್ರೆ ಸುಶೇನ್ ಮೋಹನ್ ಗುಪ್ತಾ ಎಂದು ಈ ಪ್ರಕರಣದ ತನಿಖೆ ನಡೆಸುತ್ತಿರುವ ಜಾರಿ ನಿರ್ದೇಶನಾಲಯ ಶುಕ್ರವಾರ ತಿಳಿಸಿದೆ.