ಸುರಂಗ ರಸ್ತೆ

Lalbagh ಗೆ ತಪ್ಪಿದ ಗಂಡಾಂತರ: ನಾಗರಿಕರ ಆಕ್ರೋಶಕ್ಕೆ ಮಣಿದ ಸರ್ಕಾರ; ಸುರಂಗ ರಸ್ತೆ ಮಾರ್ಗ ಬದಲಾವಣೆಗೆ ಮುಂದು..!
ಸರ್ಕಾರವು ನಿಮ್ಹಾನ್ಸ್‌ನ ಭೂಮಿಯ ಒಂದು ಭಾಗ, ವಿಲ್ಸನ್ ಗಾರ್ಡನ್ ಸಮೀಪದ ಸ್ಮಶಾನದ ಜಾಗ ಅಥವಾ ಲಾಲ್‌ಬಾಗ್ ರಸ್ತೆಯ ಮೂಲಕ ಸುರಂಗ ನಿರ್ಮಿಸುವ ಸಾಧ್ಯತೆಗಳನ್ನೂ ಪರಿಶೀಲಿಸುತ್ತಿದೆ ಎಂದು ಮೂಲಗಳು ತಿಳಿಸಿವೆ.

ಬೆಂಗಳೂರು ಸುರಂಗ ರಸ್ತೆ ಟೆಂಡರ್ ಮೊತ್ತ ಶೇ.97ರಷ್ಟು ಹೆಚ್ಚಳ..! ಇಷ್ಟು ಹಣ ಬೇಕೇ..?
ಪ್ರಸ್ತಾವಿತ ಬೆಂಗಳೂರು ಸುರಂಗ ರಸ್ತೆ ಯೋಜನೆಯ ಟೆಂಡರ್ ಮೊತ್ತವನ್ನು ಶೇ.97ರಷ್ಟು ಹೆಚ್ಚಿಸಲಾಗಿದೆ, ಬೆಂಗಳೂರಿಗೆ ಸುರಂಗ ರಸ್ತೆ ಯೋಜನೆಯ ಅಗತ್ಯವಿಲ್ಲ. ನಗರದಲ್ಲಿ ಹೆಚ್ಚುತ್ತಿರುವ ಸಂಚಾರ ದಟ್ಟಣೆಗೆ ಕಾರಣವೇನು..?

ಟನಲ್ ರಸ್ತೆ ಯೋಜನೆ ಸಮಿತಿ ಅಧ್ಯಕ್ಷನಾಗಲು ಸಿದ್ಧ, ಮೊದಲು ನಗರದ ಕಸ-ರಸ್ತೆಗುಂಡಿ ಸಮಸ್ಯೆ ಬಗೆಹರಿಸಿ: ಡಿ.ಕೆ ಶಿವಕುಮಾರ್'ಗೆ ಆರ್.ಅಶೋಕ್ ಸವಾಲು
ನನ್ನನ್ನೇ ಸಮಿತಿ ಅಧ್ಯಕ್ಷರನ್ನಾಗಿ ಮಾಡುತ್ತಾರೆಂದು ಹೇಳಿದ್ದಾರೆ. ಇಂತಹ ಯೋಜನೆ ಮಾಡಲು ಇವರಿಗೆ ನೈಪುಣ್ಯತೆ ಇದೆಯೇ ಎಂದು ಸಾಬೀತುಪಡಿಸಲು ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿ.ಕೆ.ಶಿವಕುಮಾರ್ ರಸ್ತೆಗುಂಡಿಗಳನ್ನು ಮುಚ್ಚಿಸಲಿ. ಗುಂಡಿ ಮುಚ್ಚಲು ಆಗದವರು ಸುರಂಗ ಹೇಗೆ ಮಾಡುತ್ತಾರೆ?

ಸುರಂಗ ಯೋಜನೆ ಮೂಲಕ ಕಾಂಗ್ರೆಸ್ ಲಾಲ್‌ಬಾಗ್‌ಗೆ ಸಮಾಧಿ ಅಗೆಯುತ್ತಿದೆ: ಆರ್.ಅಶೋಕ್ ಆಕ್ರೋಶ
ಇದು ಟನಲ್ ರಸ್ತೆ ಅಲ್ಲ ವಿಐಪಿ ಕಾರಿಡಾರ್ ಆಗುತ್ತದೆ. ಶೇ.90ರಷ್ಟು ಬಡವರು, ಮಧ್ಯಮ ವರ್ಗದವರು ಬಳಸುವ ಬೈಕ್, ಸೈಕಲ್‍ಗೆ ಪ್ರವೇಶವಿಲ್ಲ. ಕೇವಲ ಕಾರಿಗೆ ಮಾತ್ರ ಪ್ರವೇಶವಿದೆ. ಹಾಗಾಗಿ ಇದು ವಿಐಪಿ ರಸ್ತೆ.

ಸುರಂಗ ರಸ್ತೆಗೆ ಆರ್.ಅಶೋಕ್ ನೇತೃತ್ವದಲ್ಲಿ ಸಮಿತಿ ರಚಿಸಲು ಸಿದ್ಧ: ಡಿ.ಕೆ ಶಿವಕುಮಾರ್
ವಿರೋಧ ಪಕ್ಷದ ನಾಯಕ ಅಶೋಕ್ ನೇತೃತ್ವದಲ್ಲಿ ಸುರಂಗ ರಸ್ತೆಗೆ ಸಮಿತಿ ರಚಿಸಲು ಸಿದ್ಧನಿದ್ದೇನೆ. ಅವರು ಸೂಚಿಸಿದ ಕಡೆಯೇ ಲಾಲ್‌ಬಾಗ್ ಬಳಿ ಪ್ರವೇಶ-ನಿರ್ಗಮನ ತಾಣ ರೂಪಿಸಲಾಗುವುದು.

ಸುರಂಗ ರಸ್ತೆಗೆ ವಿರೋಧ: ತೇಜಸ್ವಿ ಸೂರ್ಯ ವಿರುದ್ಧ ರಿಜ್ವಾನ್ ಅರ್ಷದ್ ಆಕ್ರೋಶ
ಸುರಂಗ ರಸ್ತೆಯನ್ನು ತೇಜಸ್ವಿ ಸೂರ್ಯ ಅವರು ಹಣ ಲೂಟಿ ಮಾಡುವ ಯೋಜನೆ ಎಂದು ಕರೆದಿದ್ದಾರೆ. ಮುಂಬೈನಲ್ಲಿ 18 ಸಾವಿರ ಕೋಟಿ ರೂ. ವೆಚ್ಚದಲ್ಲಿ ಸುರಂಗ ರಸ್ತೆ ನಿರ್ಮಿಸುತ್ತಿದ್ದಾರೆ. ಅಲ್ಲಿಯೂ ಹಣ ಹೊಡೆಯಲು ಮಾಡುತ್ತಿದ್ದಾರಾ?

ಬೆಂಗಳೂರು: ಸುರಂಗ ರಸ್ತೆ ಬಿಡ್ ಅವಧಿ ಮತ್ತೆ ವಿಸ್ತರಣೆ
ಬಿಡ್ ಪೂರ್ವಭಾವಿ ಸಭೆಯಲ್ಲಿ ಸುರಂಗ ರಸ್ತೆ ನಿರ್ಮಾಣದ ಗುತ್ತಿಗೆ ಪಡೆಯಲು ಒಲವು ತೋರಿದ್ದ ಹಲವು ಕಂಪನಿಗಳು, ಟೆಂಡರ್‌ನಲ್ಲಿ ಭಾಗವಹಿಸಲು ಹಿಂದೇಟು ಹಾಕಿವೆ.

ಹೆಬ್ಬಾಳ ಕೆರೆ ಕಾಲುವೆ ಮಾರ್ಗ ಬದಲಾವಣೆ 'ಅವಾಸ್ತವಿಕ': ಸುರಂಗ ರಸ್ತೆ ಬಗ್ಗೆ ತಜ್ಞರ ಸಮಿತಿ ಕಳವಳ
ಸರ್ಕಾರದ ಈ ಕ್ರಮವು ಕಾನೂನುಗಳನ್ನು ಉಲ್ಲಂಘಿಸುವುದರ ಜೊತೆಗೆ, ಹಿಮ್ಮುಖ ಹರಿವು ಮತ್ತು ಪ್ರವಾಹ, ಮಣ್ಣಿನ ಸವೆತ, ಮಾಲಿನ್ಯ ಮತ್ತು ಕೆರೆಗಳ ಮಾಲಿನ್ಯ, ಸಸ್ಯ ಮತ್ತು ಪ್ರಾಣಿಗಳ ಆವಾಸಸ್ಥಾನದ ನಷ್ಟ, ಜಲಚರಗಳ ನಷ್ಟ ಮುಂತಾದ ವಿವಿಧ ಋಣಾತ್ಮಕ ಪರಿಣಾಮಗಳಿಗೆ ಕಾರಣವಾಗಬಹುದು.

ಸುರಂಗ ರಸ್ತೆಯ ಬಗ್ಗೆ DULT ಪರಿಶೀಲನಾ ವರದಿ: BBMP ನಿರ್ಲಕ್ಷಿಸಿದೆಯೇ?
ಬಿಬಿಎಂಪಿ ಕಳೆದ ವರ್ಷ ಜುಲೈಯಲ್ಲಿ, ಪ್ರಸ್ತಾವಿತ ಉತ್ತರ-ದಕ್ಷಿಣ ಕಾರಿಡಾರ್‌ನ ಕಾರ್ಯಸಾಧ್ಯತಾ ಅಧ್ಯಯನ ವರದಿಯನ್ನು BMLTA ಪರಿಶೀಲನೆ ಮತ್ತು ಅನುಮೋದನೆಗಾಗಿ ಸಲ್ಲಿಸಿತ್ತು.

