ರಾಜ್ಯಸುಮನಹಳ್ಳಿ ಮೇಲ್ಸೇತುವೆಯಲ್ಲಿ ಮತ್ತೆ ಗುಂಡಿ, ಬಿಬಿಎಂಪಿಯ ಕಳಪೆ ಕಾಮಗಾರಿಗೆ ಸಾರ್ವಜನಿಕರ ಟೀಕೆ!
ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ)ಯ ಕಳಪೆ ಕಾಮಗಾರಿ ಮತ್ತೊಮ್ಮೆ ಬೆಳಕಿಗೆ ಬಂದಿದೆ. ಮಂಗಳವಾರ ಮುಂಜಾನೆ ಸುಮನಹಳ್ಳಿ ಸೇತುವೆಯಲ್ಲಿ ಗುಂಡಿಯೊಂದು ಪತ್ತೆಯಾಗಿದ್ದು, ರಸ್ತೆಗೆ ಹಾಕಿದ್ದ ಕಾಂಕ್ರೀಟ್ ಕಳಚಿ ಕೆಳಗಿದ್ದ ಕಬ್ಬಿಣ ಕಾಣಿಸುತ್ತಿದೆ.