ಬಾಲಿವುಡ್ಕೋವಿಡ್ ಬಿಕ್ಕಟ್ಟು: ಮುಂಬೈನ ಡಬ್ಬಾವಾಲಾಗಳಿಗೆ ಬಾಲಿವುಡ್ ಸ್ಟಾರ್ ಗಳ ನೆರವಿನ ಹಸ್ತ
ಬಾಲಿವುಡ್ ಸ್ಟಾರ್ ನಟರಾದ ಸಂಜಯ್ ದತ್ ಹಾಗೂ ಸುನೀಲ್ ಶೆಟ್ಟಿ ಲಾಕ್ ಡೌನ್ ಸಮಯದಲ್ಲಿ ಮುಂಬಯಿಯ ಪ್ರಸಿದ್ದ ಡಬ್ಬಾವಾಲಾಗಳಿಗೆ ಸಹಾಯಹಸ್ತ ಚಾಚಿದ್ದಾರೆ. ಲಾಕ್ ಡೌನ್ ಕಾಲದಲ್ಲಿ ಕೆಲಸವಿಲ್ಲದೆ ಸಂಕಷ್ಟದಲ್ಲಿರುವ ಡಬ್ಬಾವಾಲಾಗಳ ಕುಟುಂಬಗಳಿಗೆ ನಟರು ಆಹಾರಸಾಮಗ್ರಿಗಳನ್ನು ಒದಗಿಸುವ ಮೂಲಕ ಸಹಾಯ ಮಾಡುತ್ತಿದ್ದಾರೆ.