ದೇಶಜೆಎಂಎಂ ಪಕ್ಷದ ಪ್ರಾಥಮಿಕ ಸದಸ್ಯತ್ವಕ್ಕೆ ಶಿಬು ಸೊರೆನ್ ಸೊಸೆ ರಾಜೀನಾಮೆ!
ಕುಟುಂಬ ಕಲಹದಿಂದಾಗಿ ಜಾರ್ಖಂಡ್ ಮುಕ್ತಿ ಮೋರ್ಚಾದ ಎಲ್ಲಾ ಸ್ಥಾನಗಳಿಗೆ ಶಿಬು ಸೊರೆನ್ ಸೊಸೆ, ಜಾಮಾ ಶಾಸಕಿ ಸೀತಾ ಸೊರೆನ್ ಅವರು ಮಂಗಳವಾರ ರಾಜೀನಾಮೆ ನೀಡಿದ್ದಾರೆ. ಪಕ್ಷದ ವರಿಷ್ಠ ಮತ್ತು ಅವರ ಮಾವ ಶಿಬು ಸೊರೆನ್ ಅವರಿಗೆ ರಾಜೀನಾಮೆ ಪತ್ರ ಸಲ್ಲಿಸಿರುವ ಸೀತಾ, ತಮ್ಮ ಕುಂದುಕೊರತೆಗಳನ್ನು ವ್ಯಕ್ತಪಡಿಸಿದ್ದಾರೆ.