ದೇಶಕೊರೋನಾ ಹಾಟ್'ಸ್ಪಾಟ್ ನಿಜಾಮುದ್ದೀನ್ ಮಸೀದಿ ಈಗ ಜನರಿಂದ ಮುಕ್ತ, 2,361 ಮಂದಿ ಸ್ಥಳಾಂತರ: ಸಿಸೋಡಿಯಾ
ಕೊರೋನಾ ಹಾಟ್'ಸ್ಪಾಟ್ ಎಂದೇ ಕರೆಯಲಾಗುತ್ತಿರುವ ದೆಹಲಿ ನಿಜಾಮುದ್ದೀನ್ ಮಸೀದಿ ಇದೀಗ ಜನರಿಂದ ಮುಕ್ತಗೊಂಡಿದ್ದು, ಮಸೀದಿ ಒಳಗೆ ಹಾಗೂ ಹೊರಗಿದ್ದ ಸುಮಾರು 2,361 ಮಂದಿಯನ್ನು ಸ್ಥಳಾಂತರಗೊಳಿಸಲಾಗಿದೆ ಎಂದು ದೆಹಲಿ ಉಪಮುಖ್ಯಮಂತ್ರಿ ಮನೀಶ್ ಸಿಸೋಡಿಯಾ ಅವರು ಬುಧವಾರ ಹೇಳಿದ್ದಾರೆ.