ವಿದೇಶಕಿಮ್ ಜಾಂಗ್ ಉನ್ ಜೀವಂತವಾಗಿದ್ದು, ಆರೋಗ್ಯವಾಗಿದ್ದಾರೆ: ದಕ್ಷಿಣ ಕೊರಿಯಾ ಭದ್ರತಾ ಸಲಹೆಗಾರ
ಉತ್ತರ ಕೊರಿಯಾ ಸರ್ವಾಧಿಕಾರಿ ಕಿಮ್ ಜಾಂಗ್ ಉನ್ ಜೀವಂತವಾಗಿದ್ದು ಆರೋಗ್ಯವಾಗಿದ್ದಾರೆ ಎಂದು ದಕ್ಷಿಣ ಕೊರಿಯಾ ಅಧ್ಯಕ್ಷ ಮೂನ್ ಜೇ-ಇನ್ ಅವರ ಉನ್ನತ ಮಟ್ಟದ ಭದ್ರತಾ ಸಲಹೆಗಾರ ಹೇಳಿದ್ದಾರೆ. ಈ ಮೂಲಕ ಕಿಮ್ ಜಾಂಗ್ ಉನ್ ಅವರ ಆನಾರೋಗ್ಯದ ಬಗ್ಗೆ ಕೇಳಿಬರುತ್ತಿರುವ ಊಹಾಪೋಹಗಳಿಗೆ ತೆರೆ ಎಳೆಯುವ ಪ್ರಯತ್ನ ಮಾಡಿದ್ದಾರೆ.