ರಾಜ್ಯಸಿಗಂದೂರು ವಿವಾದ: ಯಾವುದೇ ಕಾರಣಕ್ಕು ದೇವಾಲಯವನ್ನು ಮುಜರಾಯಿ ವ್ಯಾಪ್ತಿಗೆ ತರುವುದಿಲ್ಲ- ಮುಖ್ಯಮಂತ್ರಿ ಭರವಸೆ
ಸುಮಾರು 20 ವಿವಿಧ ಜನಾಂಗಗಳ ಸ್ವಾಮೀಜಿಗಳ ನಿಯೋಗ ಗೃಹ ಕಚೇರಿ ಕೃಷ್ಣಾದಲ್ಲಿ ಮುಖ್ಯಮಂತ್ರಿ ಯಡಿಯೂರಪ್ಪ ಅವರನ್ನು ಭೇಟಿ ಮಾಡಿ ದೇವಾಲಯದಲ್ಲಿ ಸದ್ಯ ಎದ್ದಿರುವ ಮೇಲುಸ್ತುವಾರಿ ಸಮಿತಿ ಕುರಿತ ಗೊಂದಲ ನಿವಾರಣೆ, ಭಕ್ತರ ನೀಡುವ ಹಣಕಾಸು, ದೇಣಿಗೆ ವಿಚಾರದಲ್ಲಿ ಪಾರದರ್ಶಕತೆ ತರುವ ಬಗ್ಗೆ ಪ್ರಮುಖವಾಗಿ ಮುಖ್ಯಮಂತ್ರಿಗಳ ಗಮನಕ್ಕೆ ತರಲಾಯಿತು.