ಸಿಎನ್'ಜಿ

ದರ ನಿಗದಿ ಸೂತ್ರ ಪರಿಷ್ಕರಣೆ: ಸಿಎನ್‌ಜಿ, ಪಿಎನ್‌ಜಿ ತೈಲ ದರ ಶೇ.10ರಷ್ಟು ಇಳಿಕೆ, ಬೆಲೆ ನೀತಿಯಲ್ಲಿ ಬದಲಾವಣೆಗೆ ಕೇಂದ್ರ ಸರ್ಕಾರ ಅನುಮೋದನೆ
ದೇಶ

ದರ ನಿಗದಿ ಸೂತ್ರ ಪರಿಷ್ಕರಣೆ: ಸಿಎನ್‌ಜಿ, ಪಿಎನ್‌ಜಿ ತೈಲ ದರ ಶೇ.10ರಷ್ಟು ಇಳಿಕೆ, ಬೆಲೆ ನೀತಿಯಲ್ಲಿ ಬದಲಾವಣೆಗೆ ಕೇಂದ್ರ ಸರ್ಕಾರ ಅನುಮೋದನೆ

ನೈಸರ್ಗಿಕ ಅನಿಲದ ದರ ನಿಗದಿಗೆ ಹೊಸ ಮಾನದಂಡಕ್ಕೆ ಕೇಂದ್ರ ಸರ್ಕಾರ ಮುಂದಾಗಿದ್ದು, ಈ ನಿಟ್ಟಿನಲ್ಲಿ ದರ ನಿಗದಿ ಸೂತ್ರ ಪರಿಷ್ಕರಣೆಗೆ ಕೇಂದ್ರ ಸಚಿವ ಸಂಪುಟ ಗುರುವಾರ ಒಪ್ಪಿಗೆ ನೀಡಿದೆ. ಇದರಂತೆ ಗೃಹ ಬಳಕೆಯ ಪಿಎನ್‌ಜಿ ಮತ್ತು ವಾಹನಗಳಿಗೆ ಬಳಸುವ ಸಿಎನ್‌ಜಿ ತೈಲದ ದರವು ಶೇ 10ರವರೆಗೂ ಕಡಿಮೆಯಾಗಲಿದೆ.

ಬೆಂಗಳೂರು: ನಗರದ ಸರ್ಕಾರಿ ಕಚೇರಿಗಳಿಗೆ ಸಿಎನ್‌ಜಿ ಒದಗಿಸಲು ಕೆಸಿಡಿಸಿ ಚಿಂತನೆ!
ರಾಜ್ಯ

ಬೆಂಗಳೂರು: ನಗರದ ಸರ್ಕಾರಿ ಕಚೇರಿಗಳಿಗೆ ಸಿಎನ್‌ಜಿ ಒದಗಿಸಲು ಕೆಸಿಡಿಸಿ ಚಿಂತನೆ!

ಕರ್ನಾಟಕ ಕಾಂಪೋಸ್ಟ್ ಡೆವಲಪ್‌ಮೆಂಟ್ ಕಾರ್ಪೊರೇಷನ್ (ಕೆಸಿಡಿಸಿ) ಬೆಂಗಳೂರಿನಲ್ಲಿರುವ ಎಲ್ಲಾ ಸರ್ಕಾರಿ ಕಚೇರಿಗಳಿಗೆ ಕೂಡ್ಲು ಮತ್ತು ಚಿಕ್ಕನಾಗಮಂಗಲ ಮತ್ತು ಇತರ ಸ್ಥಳಗಳಲ್ಲಿನ ಸ್ಥಾವರಗಳಿಂದ ಸಾಂದ್ರೀಕೃತ ನೈಸರ್ಗಿಕ ಅನಿಲ (ಸಿಎನ್‌ಜಿ) ಪೂರೈಸಲು ಚಿಂತನೆ ನಡೆಸುತ್ತಿದೆ ಎಂದು ತಿಳಿದುಬಂದಿದೆ.

ಡೀಸೆಲ್ ಆರ್‌ಟಿಸಿ ಬಸ್‌ಗಳನ್ನು ಸಿಎನ್‌ಜಿಗೆ ಪರಿವರ್ತಿಸಲು ಯೋಜನೆ: ಸಚಿವ ಬಿ.ಶ್ರೀರಾಮುಲು
ರಾಜ್ಯ

ಡೀಸೆಲ್ ಆರ್‌ಟಿಸಿ ಬಸ್‌ಗಳನ್ನು ಸಿಎನ್‌ಜಿಗೆ ಪರಿವರ್ತಿಸಲು ಯೋಜನೆ: ಸಚಿವ ಬಿ.ಶ್ರೀರಾಮುಲು

ಹೆಚ್ಚಿದ ತೈಲೆ ಬೆಲೆ ಹಾಗೂ ಪರಿಸರ ಕಾಳಜಿಯನ್ನು ಗಮನದಲ್ಲಿಟ್ಟುಕೊಂಡು ಎಲ್ಲಾ ರಾಜ್ಯ ಸಾರಿಗೆ ಬಸ್‌ಗಳನ್ನು ಹಂತ ಹಂತವಾಗಿ ಸಿಎನ್‌ಜಿಗೆ ಪರಿವರ್ತಿಸಲು ಯೋಜನೆ ರೂಪಿಸಲಾಗಿದೆ ಎಂದು  ಪರಿಶಿಷ್ಟ ಪಂಗಡಗಳ ಕಲ್ಯಾಣ ಸಚಿವ ಬಿ ಶ್ರೀರಾಮುಲು ಅವರು ಬುಧವಾರ ಹೇಳಿದ್ದಾರೆ.