ಸಿಎಎ ವಿರೋಧಿ ಪ್ರತಿಭಟನೆ

ಸಿಎಎ ಜಾರಿ: ಶಾಹಿನ್ ಬಾಗ್ ನಿವಾಸಿಗಳಲ್ಲಿ ಹೆಚ್ಚಿದ ಆತಂಕ!
ಕೇಂದ್ರ ಗೃಹ ಇಲಾಖೆ ಸಿಎಎ ಜಾರಿಗೆ ಅಧಿಸೂಚನೆ ಪ್ರಕಟಿಸಿದ್ದು, ಶಾಹಿನ್ ಭಾಗ್ ನಿವಾಸಿಗಳಲ್ಲಿ ಅತಂಕವನ್ನು ಹೆಚ್ಚಿಸಿದೆ.

ದೆಹಲಿ ಬಿಜೆಪಿ ಘಟಕದ ಉಪಾಧ್ಯಕ್ಷರಾಗಿ ವಿವಾದಿತ ನಾಯಕ ಕಪಿಲ್ ಮಿಶ್ರಾ ನೇಮಕ
ದೆಹಲಿ ಬಿಜೆಪಿ ಘಟಕದ ಉಪಾಧ್ಯಕ್ಷರಾಗಿ ವಿವಾದಿತ ನಾಯಕ ಕಪಿಲ್ ಮಿಶ್ರಾ ಅವರನ್ನು ನೇಮಕ ಮಾಡಲಾಗಿದೆ.

ಉತ್ತರ ಪ್ರದೇಶ: 57 ಲಕ್ಷ ರೂ. ನಷ್ಟ ಭರಿಸುವಂತೆ 60 ಸಿಎಎ ವಿರೋಧಿ ಪ್ರತಿಭಟನಾಕಾರರಿಗೆ ಪೊಲೀಸರ ನೋಟಿಸ್
ಸಿಎಎ ಮತ್ತು ಎನ್ ಆರ್ ಸಿ ವಿರೋಧಿಸಿ ನಡೆದ ಪ್ರತಿಭಟನೆ ಸಂದರ್ಭದಲ್ಲಿ ಉಂಟಾದ ರೂ. 57 ಲಕ್ಷ ನಷ್ಟ ಕೋರಿ ಇಲ್ಲಿನ ನಹ್ತಾರ್ ನ ಪೊಲೀಸರು 60 ಜನರಿಗೆ ನೋಟಿಸ್ ನೀಡಿದ್ದಾರೆ ಎಂದು ಅಧಿಕಾರಿಗಳು ಶನಿವಾರ ತಿಳಿಸಿದ್ದಾರೆ.

ಯುಐಪಿಎ ಅಡಿಯಲ್ಲಿನ ಎಲ್ಲಾ ಆರೋಪ ಮುಕ್ತಗೊಳಿಸಿದ ಎನ್ಐಎ ಕೋರ್ಟ್; ಅಖಿಲ್ ಗೊಗೊಯ್ ಜೈಲಿನಿಂದ ಬಿಡುಗಡೆ ಸಾಧ್ಯತೆ
2019ರ ಡಿಸೆಂಬರ್ ನಲ್ಲಿ ಅಸ್ಸಾಂನಲ್ಲಿ ಪೌರತ್ವ ಕಾಯ್ದೆ ವಿರೋಧಿಸಿ ವ್ಯಾಪಕ ಪ್ರತಿಭಟನೆ ನಡೆದಿದ್ದು ನಂತರ ಪ್ರತಿಭಟನೆ ಹಿಂಸಾರೂಪಕ್ಕೆ ತಿರುಗಿತ್ತು. ಈ ಸಂಬಂಧ ಗಲಬೆಗೆ ಕುಮ್ಮಕ್ಕು ನೀಡಿದ ಆರೋಪದ ಮೇಲೆ ಬಂಧಿಸಲಾಗಿದ್ದ ಶಿವಸಾಗರ್ ಶಾಸಕ ಅಖಿಲ್ ಗೊಗೊಯ್ ರನ್ನು ಜೈಲಿನಿಂದ ಬಿಡುಗಡೆ ಮಾಡುವ ಸಾಧ್ಯತೆ ಇದೆ.

ಮಂಗಳೂರು ಪೋಲೀಸ್ ಫೈರಿಂಗ್: ಚಾರ್ಜ್ ಶೀಟ್ ಸಲ್ಲಿಕೆಯಾಗಿ ವಾರದ ನಂತರ ಪೋಲೀಸ್ ಆಯುಕ್ತ ಹರ್ಷ ವರ್ಗಾವಣೆ
ಡಿಸೆಂಬರ್ 19, 2019 ರಂದು ನಡೆದ ಮಂಗಳೂರು ಹಿಂಸಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ನ್ಯಾಯಾಲಯದಲ್ಲಿ ಚಾರ್ಜ್‌ಶೀಟ್ ಸಲ್ಲಿಸಿದ ಒಂದು ವಾರದ ನಂತರ ನಗರ ಪೊಲೀಸ್ ಆಯುಕ್ತ ಪಿ.ಎಸ್.ಹರ್ಷ ಅವರನ್ನು ವರ್ಗಾವಣೆ ಮಾಡಲಾಗಿದೆ. ಸಿಎಎ ವಿರೋಧಿ ಪ್ರತಿಭಟನೆ ವೇಳೆ ಪ್ರತಿಭಟನಾಕಾರರ ಮೇಲೆ ಪೊಲೀಸರು ನಡೆಸಿದ ಗುಂಡಿನ ದಾಳಿಯಲ್ಲಿ ಇಬ್ಬರು ಸಾವನ್ನಪ್ಪಿ ಹಲವರು ಗಾಯಗೊಂಡಿದ್ದರು.

ಪಾಕ್ ಪರ ಘೋಷಣೆ ಪ್ರಕರಣ: ಅಮೂಲ್ಯ ಲಿಯೋನ್‍ಗೆ ಷರತ್ತು ಬದ್ಧ ಜಾಮೀನು ಮಂಜೂರು
ಕೇಂದ್ರ ಸರ್ಕಾರದ ಸಿಎಎ ವಿರೋಧಿಸಿ ಬೆಂಗಳೂರಿನ ಫ್ರೀಡಂ ಪಾರ್ಕ್ ನಲ್ಲಿ ನಡೆದಿದ್ದ ಪ್ರತಿಭಟನಾ ಕಾರ್ಯಕ್ರಮದಲ್ಲಿ ಪಾಕಿಸ್ತಾನ ಜಿಂದಾಬಾದ್ ಎಂದು ಘೋಷಣೆ ಕೂಗಿ ಬಂಧನಕ್ಕೊಳಗಾಗಿದ್ದ ಅಮೂಲ್ಯ ಲಿಯೋನಾಗೆ ಕೋರ್ಟ್ ಷರತ್ತುಬದ್ಧ ಜಾಮೀನು ಮಂಜೂರು ಮಾಡಿದೆ.

ಕೊರೋನಾ ವೈರಸ್ ಭೀತಿ: ಜೆಸಿಬಿ ಮೂಲಕ ಶಹೀನ್ ಭಾಗ್ ಪ್ರತಿಭಟನಾ ಸ್ಥಳ ತೆರವು
ಮಾರಕ ಕೊರೋನಾ ವೈರಸ್ ಭೀತಿಯಿಂದಾಗಿ ದೇಶಾದ್ಯಂತ ಹೇರಲಾಗಿರುವ ಲಾಕ್ ಡೌನ್ ಹಿನ್ನಲೆಯಲ್ಲಿ ದೆಹಲಿಯ ಶಹೀನ್ ಭಾಗ್ ನ ಸಿಎಎ ವಿರೋಧಿ ಪ್ರತಿಭಟನಾಕಾರನ್ನು ತೆರವುಗೊಳಿಸಲಾಗಿದೆ.

ಚೆನ್ನೈ: ಕೊರೋನಾವೈರಸ್ ಹರಡುವ ಭೀತಿ, ಸಿಎಎ ವಿರೋಧಿ ಪ್ರತಿಭಟನೆ ರದ್ದು
ಕೋವಿಡ್ -19 ಹರಡುವ ಭೀತಿಯಿಂದಾಗಿ ಇಲ್ಲಿನ ವಾಷರ್ ಮೆನ್ ಪೇಟ್ ಯಲ್ಲಿ ಕಳೆದ ಒಂದು ತಿಂಗಳಿನಿಂದ ನಡೆಸಲಾಗುತ್ತಿದ್ದ ಸಿಎಎ ವಿರೋಧಿ ಪ್ರತಿಭಟನೆಯನ್ನು ಪ್ರತಿಭಟನಾಕಾರರು ಕೈಬಿಟ್ಟಿದ್ದಾರೆ.

ಸಿಎಎ ವಿರೋಧಿ ಪ್ರತಿಭಟನೆಗೆ ಪ್ರಚೋದನೆ: ಐಸಿಸ್ ನಂಟು ಹೊಂದಿದ್ದ ದಂಪತಿ ಬಂಧನ
ಇತ್ತೀಚಿನ ಸಿಎಎ ವಿರೋಧಿ ಪ್ರತಿಭಟನೆಯಲ್ಲಿ ಸಕ್ರಿಯವಾಗಿ ಭಾಗಿಯಾಗಿದ್ದ ಇಬ್ಬರು ಶಂಕಿತ ಇಸ್ಲಾಮಿಕ್ ಸ್ಟೇಟ್ ಖೊರಾಸಾನ್ ಪ್ರಾವಿನ್ಸ್ (ಐಎಸ್ಕೆಪಿ) ಭಯೋತ್ಪಾದಕರನ್ನು ದೆಹಲಿ ಪೋಲೀಸರು ಓಖ್ಲಾದಲ್ಲಿ ಬಂಧಿಸಿದ್ದಾರೆ. ಈ ಮಧ್ಯೆ ಈ ಜೋಡಿ ದೇಶದಲ್ಲಿ ಆತ್ಮಹತ್ಯಾ ದಾಳಿ ನಡೆಸಲು ಯೋಜಿಸುತ್ತಿದ್ದಾರೆ ಎಂದು ಮಾಹಿತಿ ಹೊರಬಿದ್ದಿದೆ.

