ಸಿಎಂ ಸುಖ್ವಿಂದರ್ ಸಿಂಗ್ ಸುಖು

ರಾಮ ಮಂದಿರ ಉದ್ಘಾಟನೆ: ಜ.22 ರಜೆ ಘೋಷಿಸಿದ ಹಿಮಾಚಲ ಪ್ರದೇಶ ಕಾಂಗ್ರೆಸ್ ಸರ್ಕಾರ!
ಅಯೋಧ್ಯೆ ರಾಮಮಂದಿರ ಉದ್ಘಾಟನಾ ಕಾರ್ಯಕ್ರಮಕ್ಕೆ ಬರುವುದಿಲ್ಲ ಎಂದು ಹೇಳಿದ್ದ ಕಾಂಗ್ರೆಸ್ ಗೆ ತನ್ನದೇ ಪಕ್ಷದ ಸರ್ಕಾರ ಶಾಕ್ ನೀಡಿದ್ದು, ಜನವರಿ 22ರಂದು ರಜೆ ಘೋಷಣೆ ಮಾಡಿದೆ.

ಹಿಮಾಚಲ ಪ್ರದೇಶ ಪ್ರವಾಹ: 250ಕ್ಕೂ ಹೆಚ್ಚು ಜನರ ಸಾವಿನ ನಂತರ ಎಚ್ಚೆತ್ತ ಸರ್ಕಾರ, ರಸ್ತೆ ನಿರ್ಮಾಣ ನಿಯಮದಲ್ಲಿ ಬದಲಾವಣೆ
ಹಿಮಾಚಲ ಪ್ರದೇಶದಲ್ಲಿ ಸಂಭವಿಸಿದ ಪ್ರವಾಹದಲ್ಲಿ 250ಕ್ಕೂ ಮಂದಿ ಸಾವನ್ನಪ್ಪಿದ್ದ ನಂತರ ಮುಖ್ಯಮಂತ್ರಿ ಸುಖವಿಂದರ್ ಸಿಂಗ್ ಸುಖು ನಿಯಮಗಳನ್ನು ರಸ್ತೆ ನಿರ್ಮಾಣದಲ್ಲಿ ನಿಯಮಗಳನ್ನು ಬದಲಾಯಿಸಿದ್ದಾರೆ. ರಾಜ್ಯದ ಎಲ್ಲಾ ರಸ್ತೆಗಳಿಗೆ ಸರಿಯಾದ ಒಳಚರಂಡಿ ಮತ್ತು ಅಡ್ಡ ಚರಂಡಿ ವ್ಯವಸ್ಥೆಯನ್ನು ಕಡ್ಡಾಯಗೊಳಿಸಲಾಗುವುದು ಎಂದು ಅವರು ಶುಕ್ರವಾರ ಹೇಳಿದ್ದಾರೆ.

ಪೈನ್ ಮುಳ್ಳುಗಳು, ಬಿದಿರಿನಿಂದ ಜೈವಿಕ ಇಂಧನ ಉತ್ಪಾದನೆಗೆ ಪೈಲಟ್ ಯೋಜನೆ ಆರಂಭ: ಹಿಮಾಚಲ ಮುಖ್ಯಮಂತ್ರಿ
ಹಿಮಾಚಲ ಪ್ರದೇಶ ಅಗಾಧವಾದ ಕೋನಿಫೆರಸ್ ಅರಣ್ಯದಿಂದ ತುಂಬಿದ್ದು, ಬಿದಿರು ಉತ್ಪಾದನೆಗೆ ಹೆಚ್ಚಿನ ಸಾಮರ್ಥ್ಯ ಹೊಂದಿರುವುದರಿಂದ ಪೈನ್ ಮುಳ್ಳುಗಳು ಮತ್ತು ಬಿದಿರಿನಿಂದ ಜೈವಿಕ ಇಂಧನ ಉತ್ಪಾದನೆಗೆ ಪೈಲಟ್ ಯೋಜನೆ ಪ್ರಾರಂಭಿಸಲಿದೆ ಎಂದು ಮುಖ್ಯಮಂತ್ರಿ ಸುಖ್ವಿಂದರ್ ಸಿಂಗ್ ಸುಖು ಹೇಳಿದ್ದಾರೆ.

