ರಾಜ್ಯಕೃಷಿ ಮಸೂದೆ: ಸಿಎಂ ಮಾತಿಗೆ ಸಮಾಧಾನಗೊಳ್ಳದ ರೈತರು, ಪ್ರತಿಭಟನೆ ಮುಂದುವರೆಸಲು ನಿರ್ಧಾರ
ರೈತರಿಗೆ ಮಾರಕವಾಗಿರುವ ಮಸೂದೆಗಳನ್ನು ಕೈಬಿಡುವಂತೆ ಆಗ್ರಹಿಸಿ ಸೆ.28ಕ್ಕೆ ರಾಜ್ಯ ಬಂದ್'ಗೆ ಕರೆ ನೀಡಿರುವ ರೈತ, ಕಾರ್ಮಿಕ ಮತ್ತು ದಲಿತ ಸಂಘಟನೆಗಳ ಐಕ್ಯ ಹೋರಾಟ ಸಮಿತಿಯ ಸದಸ್ಯರೊಂದಿಗೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಶುಕ್ರವಾರ ನಡೆಸಿದ ಸಂಧಾನ ಸಭೆ ವಿಫಲವಾಗಿದ್ದು, ಸೋಮವಾರ ಬಂದ್ ನಡೆಸುವುದು ನಿಶ್ಚಿತವಾಗಿದೆ.