ರಾಜ್ಯಕಾಂಗ್ರೆಸ್ ಗ್ಯಾರಂಟಿ ತಂದ ಸಂಕಷ್ಟ: ಟಿಕೆಟ್ ಖರೀದಿಸದೆ ತಲೆನೋವಾಗುತ್ತಿರುವ ಮಹಿಳಾ ಪ್ರಯಾಣಿಕರು; ಸಿಎಂಗೆ ಸಾರಿಗೆ ನಿಗಮಗಳಿಂದ ಪತ್ರ!
ಮಹಿಳೆಯರಿಗೆ ಉಚಿತ ಪ್ರಯಾಣ ಯೋಜನೆ ಘೋಷಣೆ ಮಾಡಿರುವ ಸರ್ಕಾರ, ಯೋಜನೆಯನ್ನು ಇನ್ನೂ ಜಾರಿಗೆ ತಂದಿಲ್ಲ. ಆದರೆ, ಮಹಿಳಾ ಪ್ರಯಾಣಿಕರು ಮಾತ್ರ ಸರ್ಕಾರ ಘೋಷಣೆ ಮಾಡಿದೆ, ನಾವು ಟಿಕೆಟ್ ಖರೀದಿಸುವುದಿಲ್ಲ ಎಂದು ಹೇಳುವ ಮೂಲಕ ಬಿಎಂಟಿಸಿ, ಕೆಎಸ್ಆರ್ಟಿಸಿ ಸಾರಿಗೆ ನಿಗಮಗಳಿಗೆ ದೊಡ್ಡ ತಲೆನೋವಾಗಿ ಪರಿಣಮಿಸುತ್ತಿದ್ದಾರೆ.