ರಾಜ್ಯಬಳ್ಳಾರಿಯಲ್ಲಿ ಸಿ-ಕೆಟಗರಿ ಗಣಿಗಾರಿಕೆಗೆ ಎಫ್ಎಸಿ ಒಪ್ಪಿಗೆ; ಪರಿಸರ, ಹಳ್ಳಿ ಜನರ ಆರೋಗ್ಯಕ್ಕೆ ಧಕ್ಕೆಯಾಗುವ ಆತಂಕ!
ಬಳ್ಳಾರಿ ಸೇರಿದಂತೆ ರಾಜ್ಯದ ಮೂರು ಜಿಲ್ಲೆಗಳ ಗಣಿಗಳನ್ನು ಸಿ- ಕೆಟಗರಿ ಗಣಿಗಾರಿಕೆಗೆ ಗುತ್ತಿಗೆ ನೀಡಲು ಕೇಂದ್ರ ಅರಣ್ಯ ಸಲಹಾ ಸಮಿತಿ (ಎಫ್ಎಸಿ) ಹಸಿರು ನಿಶಾನೆ ತೋರಿದೆ. ಇದೀಗ ಬಳ್ಳಾರಿ ಜಿಲ್ಲೆಯಲ್ಲಿ ಹೆಚ್ಚುತ್ತಿರುವ ಅರಣ್ಯ ನಾಶ, ಅನಾರೋಗ್ಯ ಮತ್ತು ಅಕ್ರಮ ಗಣಿಗಾರಿಕೆ ಬಗ್ಗೆ ಕಾರ್ಯಕರ್ತರು ಆತಂಕಗೊಂಡಿದ್ದಾರೆ.