ರಾಜ್ಯವೈದ್ಯಕೀಯ ಸೇವೆ ನಮ್ಮ ಆಯ್ಕೆ, ರೋಗಿಗಳು ವೈರಸ್'ನಿಂದ ಮುಕ್ತರಾಗುವುದಷ್ಟೇ ಮುಖ್ಯ: ನರ್ಸ್ ವಾರಿಯರ್
ಕೊರೋನಾ ವೈರಸ್ ದೇಶದಲ್ಲಿ ಕಾಲಿಟ್ಟಾಗಿನಿಂದಲೂ ವೈದ್ಯಕೀಯ ಸಿಬ್ಬಂದಿಗಳು ಜೀವಪಣಕ್ಕಿಟ್ಟು ಹಗಲು ರಾತ್ರಿ ಎನ್ನದೇ ಮಹಾಮಾರಿ ವಿರುದ್ಧ ಹೋರಾಟ ಮಾಡುತ್ತಿದ್ದಾರೆ. ರೋಗಿಗಳಲ್ಲಿರುವ ವೈರಸ್ ತಮ್ಮನ್ನೂ ಬಲಿಪಡೆದುಕೊಳ್ಳಬಹುದು ಎಂಬ ಸತ್ಯ ಗೊತ್ತಿದ್ದರೂ ಸೈನಿಕರಂತೆ ಸುರಕ್ಷಾ ಸಾಧನಗಳನ್ನು ಧರಿಸಿ, ಕಾರ್ಯಪ್ರವೃತ್ತರಾಗಿದ್ದಾರೆ.