ರಾಜ್ಯಪಡಿತರ ಚೀಟಿದಾರರ ಮನೆ ಬಾಗಿಲಿಗೆ ರೇಷನ್ ವಿತರಿಸುವ ಆಂಧ್ರ ಸರ್ಕಾರದ ವ್ಯವಸ್ಥೆ ಉತ್ತಮವಾಗಿದೆ: ಕೆ ಹೆಚ್ ಮುನಿಯಪ್ಪ
ಸಾರ್ವಜನಿಕ ವಿತರಣಾ ವ್ಯವಸ್ಥೆ (PDS) ಅಡಿಯಲ್ಲಿ ಪಡಿತರ ಚೀಟಿದಾರರ ಮನೆ ಬಾಗಿಲಿಗೆ ಮೊಬೈಲ್ ವಿತರಣಾ ಘಟಕಗಳ ಮೂಲಕ (Door delivery vehicles) ಪಡಿತರವನ್ನು ತಲುಪಿಸುವ ಆಂಧ್ರಪ್ರದೇಶ ಸರ್ಕಾರದ ವ್ಯವಸ್ಥೆ ಉತ್ತಮವಾಗಿದೆ ಎಂದು ಕರ್ನಾಟಕ ರಾಜ್ಯ ಆಹಾರ ಮತ್ತು ನಾಗರಿಕ ಸರಬರಾಜು ಸಚಿವ ಕೆ.ಎಚ್.ಮುನಿಯಪ್ಪ ತಿಳಿಸಿದ್ದಾರೆ.