ಸಾರಿಗೆ ಮುಷ್ಕರ

KSRTC-BMTC Strike: ಮೇ 20ರಿಂದ ಸಾರಿಗೆ ನೌಕರರ ಅನಿರ್ದಿಷ್ಟಾವಧಿ ಮುಷ್ಕರ; 'ನೋ ವರ್ಕ್ ನೋ ಪೇ' ನಿಯಮ ಜಾರಿಗೆ ಸರ್ಕಾರ ಮುಂದು, ಕಠಿಣ ಕ್ರಮದ ಎಚ್ಚರಿಕೆ..!
ಸಾರಿಗೆ ನೌಕರರ ಒಕ್ಕೂಟಗಳು ಜಂಟಿಯಾಗಿ ಪ್ರತಿಭಟನೆ ಹಾಗೂ ಮುಷ್ಕರಕ್ಕೆ ಕರೆ ನೀಡಿದ್ದು ಮುಷ್ಕರ ನಡೆದರೆ ಸರ್ಕಾರಿ ಸಾರಿಗೆ ಸಂಚಾರದಲ್ಲಿ ವ್ಯತ್ಯಯವಾಗುವ ಸಾಧ್ಯತೆ ಇದೆ.

ನಿಮ್ಮ ಘನಂದಾರಿ ಆಡಳಿತದಿಂದ ಸಾರಿಗೆ ನಿಗಮಗಳನ್ನು ಸರ್ವನಾಶ ಮಾಡಿಬಿಟ್ಟರಲ್ಲ ಸ್ವಾಮಿ: ಸಿದ್ದರಾಮಯ್ಯ ವಿರುದ್ಧ BJP ವಾಗ್ದಾಳಿ
ಬಸ್ಸಿಲ್ಲ..ಬಸ್ಸಿಲ್ಲ, ವಿದ್ಯಾರ್ಥಿಗಳು ಶಾಲಾ ಕಾಲೇಜುಗಳಿಗೆ ಹೋಗಲು ಬಸ್ಸಿಲ್ಲ. ನೌಕರರು, ಉದ್ಯೋಗಿಗಳು ಕೆಲಸಕ್ಕೆ ಹೋಗಲು ಬಸ್ಸಿಲ್ಲ. ನೆಂಟರಿಷ್ಟರ ಮನೆಗಳಿಗೆ, ಶುಭ ಸಮಾರಂಭಗಳಿಗೆ, ಸಾವು-ನೋವಿಗೆ ಹೋಗಲು ಬಸ್ಸಿಲ್ಲ.

ESMA ಜಾರಿ, ವೇತನ ಕಡಿತ ಬೆದರಿಕೆಗೂ ಬಗ್ಗದ ಸಾರಿಗೆ ನೌಕರರು: ಮುಷ್ಕರ ಆರಂಭ; ರಸ್ತೆಗಿಳಿಯದ KSRTC-BMTC; ಖಾಸಗಿ ಬಸ್ಗಳ ಮೊರೆ; Video
ನಾಲ್ಕೂ ನಿಗಮಗಳಲ್ಲಿ ಸುಮಾರು 1,700 ಎಲೆಕ್ನಿಕ್ ಬಸ್‌ಗಳು ಸೇವೆ ನೀಡುತ್ತಿವೆ. ಅದರಲ್ಲಿ ಬಿಎಂಟಿಸಿ ಒಂದರಲ್ಲೇ 1,500 ಎಲೆಕ್ನಿಕ್ ಬಸ್‌ಗಳು ಸಂಚರಿಸುತ್ತಿವೆ. ಆ ಬಸ್ ಗಳಲ್ಲಿ ಖಾಸಗಿ ಚಾಲಕರನ್ನು ನಿಯೋಜಿಸಲಾಗಿದೆ.

ಕಾರ್ಮಿಕ ಇಲಾಖೆಯೊಂದಿಗಿನ ಸಭೆ ಮುಂದೂಡಿಕೆ: ತೂಗುಯ್ಯಾಲೆಯಲ್ಲಿ ಸಾರಿಗೆ ನೌಕರರ ಮುಷ್ಕರ!
ಕಾರ್ಮಿಕ ಸಂಘದ ಮುಖಂಡ ಎಚ್.ವಿ.ಅನಂತ ಸುಬ್ಬರಾವ್ ನೇತೃತ್ವದಲ್ಲಿ ಕಾರ್ಮಿಕ ಇಲಾಖೆಯೊಂದಿಗೆ ಮಾತುಕತೆ ನಡೆಸಲಾಗುತ್ತದೆ ಎಂದು ಸದಸ್ಯರು ಹೇಳಿದ್ದಾರೆ.

ಮುಷ್ಕರ ನಡೆಸುವ ಸಮಯ ಇದಲ್ಲ, ಕೂಡಲೇ ಕರ್ತವ್ಯಕ್ಕೆ ಹಾಜರಾಗಿ: ಸಾರಿಗೆ ನೌಕರರಿಗೆ ಹೈಕೋರ್ಟ್ ಸೂಚನೆ
ಇಡೀ ರಾಜ್ಯ ಕೊರೋನಾ ವೈರಸ್ ಹಿಡಿತದಲ್ಲಿರುವುದರಿಂದ ಮುಷ್ಕರ ನಡೆಸಲು ಇದು ಅತ್ಯಂತ ಕೆಟ್ಟ ಸಮಯ. ಕೂಡಲೇ ಮುಷ್ಕರ ನಿಲ್ಲಿಸಿ, ಸೇವೆ ಆರಂಭಿಸಿ ಎಂದು ಹೈಕೋರ್ಟ್ ಮಂಗಳವಾರ ಮುಷ್ಕರ ನಿರತ ಸಾರಿಗೆ ನೌಕರರಿಗೆ ಸೂಚನೆ ನೀಡಿದೆ.

ಸಾರಿಗೆ ಮುಷ್ಕರ: ಕೋಡಿಹಳ್ಳಿ ಚಂದ್ರಶೇಖರ್ ಸೇರಿ 17 ಮಂದಿ ವಿರುದ್ಧ ಎಫ್ಐಆರ್, 200 ಸಿಬ್ಬಂದಿ ವಜಾ
ಸಾರಿಗೆ ಸಂಸ್ಥೆ ಸಿಬ್ಬಂದಿಯನ್ನು ಪ್ರಚೋದಿಸಿ ಕರ್ತವ್ಯಕ್ಕೆ ಅಡ್ಡಿಪಡಿಸಿದ ಆರೋಪದಡಿ ರಾಜ್ಯ ರಸ್ತೆ ಸಾರಿಗೆ ನೌಕರರ ಒಕ್ಕೂಟದ ಗೌರವಾಧ್ಯಕ್ಷ ಕೋಡಿಹಳ್ಳಿ ಚಂದ್ರಶೇಕರ್ ಸೇರಿದಂತೆ 17 ಮಂದಿ ವಿರುದ್ಧ ಎಫ್ಐಆರ್ ದಾಖಲಿಸಲಾಗಿದೆ.

ಮುಷ್ಕರ ನಿರತ ಬಿಎಂಟಿಸಿ ಸಿಬ್ಬಂದಿಗೆ ಶಾಕ್: ಒಂದೇ ದಿನ 2,443 ಸಿಬ್ಬಂದಿ ವಜಾ!
ನೋಟಿಸ್ ನೀಡಿದರೂ ಕೆಲಸಕ್ಕೆ ಹಾಜರಾಗದಿದ್ದಕ್ಕೆ ಮುಷ್ಕರ ನಿರತ ಬಿಎಂಟಿಸಿಯ 2,443 ಸಿಬ್ಬಂದಿಯನ್ನು ಆಡಳಿತ ಮಂಡಳಿ ಅಮಾನತುಗೊಳಿಸಿದೆ.

ಸಾರಿಗೆ ಮುಷ್ಕರ ಹಿಂಸಾ ರೂಪ ಪಡೆಯಬಾರದು: ಹೆಚ್.ಡಿ. ಕುಮಾರಸ್ವಾಮಿ
ಸಾರಿಗೆ ನೌಕರರು ಆರನೇ ವೇತನ ಆಯೋಗ ಶಿಫಾರಸ್ಸು ಜಾರಿಗಾಗಿ ನಡೆಸುತ್ತಿರುವ ಮುಷ್ಕರ ಹಿಂಸೆ ರೂಪ ಪಡೆಯಬಾರದು. ಮುಷ್ಕರದ ಹೆಸರಿನಲ್ಲಿ ಯಾರ ಹಠವೂ ಗೆಲ್ಲದಿರಲಿ. ಮುಷ್ಕರ ನಾಗರಿಕರಿಗೆ ಹಿತವಾಗಿರಲಿ ಎಂದು ಮಾಜಿ ಮುಖ್ಯಮಂತ್ರಿ ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ ಹೆಚ್.ಡಿ.ಕುಮಾರಸ್ವಾಮಿ ಸಲಹೆ ನೀಡಿದ್ದಾರೆ.

ಮುಷ್ಕರ ಕೈಬಿಡದ್ದರೆ ಶಿಸ್ತು ಕ್ರಮ: ಸಿಎಂ ಬಿಎಸ್ ಯಡಿಯೂರಪ್ಪ ಖಡಕ್ ಎಚ್ಚರಿಕೆ
ಸಾರಿಗೆ ನೌಕರರು ಮುಷ್ಕರ ಕೈಬಿಟ್ಟುಕೂಡಲೇ ಕರ್ತವ್ಯಕ್ಕೆ ಹಾಜರಾಗದಿದ್ದರೆ ವೇತನ ಕಡಿತ, ಮುಲಾಜಿಲ್ಲದೆ ಶಿಸ್ತು ಕ್ರಮ ಜರುಗಿಸುವುದಾಗಿ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಖಡಕ್ ಎಚ್ಚರಿಕೆ ನೀಡಿದ್ದಾರೆ.

