ಸಾಮೂಹಿಕ ವಿವಾಹ

ಚಿಕ್ಕಬಳ್ಳಾಪುರದಲ್ಲಿ ಸಾಮೂಹಿಕ ವಿವಾಹ: 125 ಜೋಡಿಗಳಿಗೆ ಸೀಮೆ ಹಸು ಉಡುಗೊರೆ ನೀಡಿದ ಕಾಂಗ್ರೆಸ್ ಶಾಸಕ!
ಸೀಮೆ ಹಸುವಿನ ಜೊತೆಗೆ 50 ಸಾವಿರ ರೂ. ನಗದು ಸಹಾಯ ನೀಡಿದ್ದಾರೆ. ಇನ್ನು ಸಾಮೂಹಿಕ ವಿವಾಹದ ಜೊತೆಗೆ ಶ್ರೀ ತಿರುಮಲ ತಿರುಪತಿ ದೇವಸ್ಥಾನದ ವತಿಯಿಂದ ಶ್ರೀ ಲಕ್ಷ್ಮಿ ವೆಂಕಟೇಶ್ವರ ಕಲ್ಯಾಣೋತ್ಸವವನ್ನೂ ಆಯೋಜಿಸಲಾಗಿತ್ತು.

ಹೆಸರಿಗೆ ಸಾಮೂಹಿಕ ವಿವಾಹ, ಆದ್ರೆ 42 ವರರಿಗೆ ವಧುಗಳೇ ಇಲ್ಲ; ಮದುವೆ ಹೆಸರಲ್ಲಿ ಬೃಹತ್ ದೋಖಾ, ಹಗರಣ ಬಟಾಬಯಲು!
ರಾಜ್ಯ ಸರ್ಕಾರದ ಬೆಂಬಲಿತ ಸಾಮೂಹಿಕ ವಿವಾಹ ಯೋಜನೆಯಡಿ ಆಯೋಜಿಸಲಾದ ಕಾರ್ಯಕ್ರಮವೊಂದು ಇದೀಗ ತೀವ್ರ ತನಿಖೆಗೆ ಒಳಪಟ್ಟಿದ್ದು, ತನಿಖಾಧಿಕಾರಿಗಳು ಬೆಚ್ಚಿಬೀಳಿಸುವಂತಹ ಅಂಶವೊಂದನ್ನು ಪತ್ತೆಹಚ್ಚಿದ್ದಾರೆ.

ದಂಪತಿಗಳು ಒಂದು ಅಥವಾ ಎರಡು ಮಕ್ಕಳ ಮಾತ್ರ ಮಾಡಿಕೊಳ್ಳಬೇಕು: ಸಿಎಂ ಸಿದ್ದರಾಮಯ್ಯ
ಜನಸಂಖ್ಯೆ ನಿಯಂತ್ರಣ ಮಾಡಬೇಕು. ಅಂತರ್ಜಾತಿ ವಿವಾಹಗಳು ಹೆಚ್ಚಾಗಬೇಕು. ಜಾತಿ, ವರ್ಗ ಪದ್ಧತಿ, ಅಸ್ಪೃಶ್ಯತೆ ಇವೆಲ್ಲವೂ ನಿರ್ಮೂಲನೆಯಾಗಬೇಕು ಎಂದು ಹೇಳಿದರು.

ರಾಯಚೂರು: ಸಾಮೂಹಿಕ ವಿವಾಹ ಕಾರ್ಯಕ್ರಮದಲ್ಲಿ ಶಾಸಕ ಮಕ್ಕಳ ವಿವಾಹ; ಪ್ರಶಂಸೆಗಳ ಮಹಾಪೂರ
ಮಸ್ಕಿ ಶಾಸಕ ಬಸನಗೌಡ ತುರುವಿಹಾಳ ಪುತ್ರ ಮತ್ತು ರಾಯಚೂರು ಗ್ರಾಮೀಣ ಶಾಸಕ ಬಸನಗೌಡ ದದ್ದಲ್ ಸಹೋದರ ಪುತ್ರಿಯ ಮದುವೆ ಸಾಮೂಹಿಕ ವಿವಾಹ ಕಾರ್ಯಕ್ರಮದಲ್ಲಿ ನೆರವೇರಿತು.

ಐದು ಗ್ಯಾರಂಟಿ ಯೋಜನೆಗಳಿಗೆ ಹಣ ಹೊಂದಿಕೆ, ಗಗನಕ್ಕೇರುತ್ತಿರುವ ಚಿನ್ನದ ದರ: ಹಳ್ಳ ಹಿಡಿಯಿತಾ ಸರ್ಕಾರದ 'ಸಪ್ತಪದಿ'!
ಬಡ ಕುಟುಂಬಗಳ ವಧು ಮತ್ತು ವರರಿಗೆ ನೆರವು ನೀಡಲು ರಾಜ್ಯ ಸರ್ಕಾರವು ತನ್ನ ಮಾಂಗಲ್ಯ ಭಾಗ್ಯ ಯೋಜನೆಯನ್ನು (ಸಾಮೂಹಿಕ ವಿವಾಹ) ಜಾರಿಗೊಳಿಸಿದೆ. ಆದರೆ ಸರ್ಕಾರದ ಐದು ಖಾತರಿ ಯೋಜನೆಗಳಿಗೆ ಹಣವನ್ನು ಹೊಂದಿಸುವುದು ಹಾಗೂ ಏರುತ್ತಿರುವ ಚಿನ್ನದ ಬೆಲೆಯ ಕಾರಣ ರಾಜ್ಯ ಸರ್ಕಾರದ ಸಪ್ತಪದಿ ಕಾರ್ಯ ಹಳ್ಳ ಹಿಡಿಯತ್ತಿದೆ.

'ನನ್ನ ತಾಯಿ ಅಂದು ಸಾಯಲು ನಿರ್ಧರಿಸಿದ್ದಾಗ ಹೆಗ್ಗಡೆಯವರು ಬುದ್ದಿಮಾತು ಹೇಳಿ ಕಳುಹಿಸಿದ್ದರು': ಧರ್ಮಸ್ಥಳದಲ್ಲಿ ನಟ ದರ್ಶನ್
ಧರ್ಮಸ್ಥಳ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆ ಅವರ ನೇತೃತ್ವದಲ್ಲಿ ನಿನ್ನೆ ಮೇ 3ರಂದು ಬುಧವಾರ ಸಂಜೆ ಧರ್ಮಸ್ಥಳದಲ್ಲಿ 51ನೇ ವರ್ಷದ ಸಾಮೂಹಿಕ ವಿವಾಹ ನಡೆಯಿತು.

ರಾಜ್ಯದಲ್ಲಿ 'ಸಪ್ತಪದಿ' ಸಾಮೂಹಿಕ ವಿವಾಹ ಕಾರ್ಯಕ್ರಮ ಪುನಾರಂಭ: ಕೋಟ ಶ್ರೀನಿವಾಸ ಪೂಜಾರಿ
ರಾಜ್ಯ ಸರ್ಕಾರದ ಮಹತ್ವಾಕಾಂಕ್ಷೆಯ ಸಪ್ತಪದಿ ಸಾಮೂಹಿಕ ವಿವಾಹ ಕಾರ್ಯಕ್ರಮ ಮತ್ತೆ ಪುನಾರಂಭಗೊಳ್ಳಲಿದೆ ಎಂದು ಮುಜರಾಯಿ ಸಚಿವ ಕೋಟಾ ಶ್ರೀನಿವಾಸ ಪೂಜಾರಿ ತಿಳಿಸಿದ್ದಾರೆ.

ರಾಜ್ಯ ಸರ್ಕಾರದ ಮಹತ್ವದ ಸಪ್ತಪದಿ ಯೋಜನೆ ಮೇಲೆ ಕೊರೋನಾ ಕರಿನೆರಳು: ಇನ್ನೂ 1 ವರ್ಷ ಸಾಮೂಹಿಕ ವಿವಾಹವಿಲ್ಲ?
ರಾಜ್ಯ ಸರ್ಕಾರದ ಮಹತ್ವದ ಸಪ್ತಪದಿ ಯೋಜನೆ ಮೇಲೆ ಕೊರೋನಾ ವೈರಸ್ ಕರಿನೆರಳು ಬಿದ್ದಿದ್ದು, ಈ ವರ್ಷ ಸಾಮೂಹಿಕ ವಿವಾಹ ನಡೆಸುವುದು ಸಂಶಯವೆಂದೇ ಹೇಳಲಾಗುತ್ತಿದೆ.

ಸಾಮೂಹಿಕ ವಿವಾಹದ ಮೇಲೆ ಕೊರೋನಾ ಕರಿನೆರಳು: ಸರ್ಕಾರದ ಸಪ್ತಪದಿ ಯೋಜನೆ ಮುಂದೂಡಿಕೆ
ರಾಜ್ಯ ಸರ್ಕಾರದ ಮಹತ್ವದ ಸಪ್ತಪದಿ ಯೋಜನೆ ಮೇಲೆ ಕೊರೋನಾ ಕರಿನೆರಳು ಆವರಿಸಿದ್ದು, ಸಾಮೂಹಿಕ ವಿವಾಹ ಯೋಜನೆ ಮುಂದೂಡಲಾಗಿದೆ.

