ಸಾಗಣೆ

ಉತ್ತರ ಪ್ರದೇಶ: ಗೋವುಗಳನ್ನು ಸಾಗಿಸುತ್ತಿದ್ದ ವ್ಯಕ್ತಿಗೆ ಅಪರಿಚಿತರಿಂದ ಗುಂಡಿನ ದಾಳಿ
ಟ್ರಕ್‌ನಲ್ಲಿ ಹಸುಗಳನ್ನು ಸಾಗಿಸುತ್ತಿದ್ದ ವ್ಯಕ್ತಿಯೊಬ್ಬರಿಗೆ ಅಪರಿಚಿತ ವ್ಯಕ್ತಿಗಳು ಗುಂಡು ಹಾರಿಸಿದ ಪರಿಣಾಮ ಗಾಯಗೊಂಡಿರುವ ಘಟನೆ ಉತ್ತರ ಪ್ರದೇಶದ ಮೈನ್ ಪುರಿ ಜಿಲ್ಲೆಯ ಪಾರಾ ಪ್ರದೇಶದಲ್ಲಿ ನಡೆದಿದೆ ಎಂದು ಪೊಲೀಸರು ಗುರುವಾರ ತಿಳಿಸಿದ್ದಾರೆ.

ಬೆಂಗಳೂರಿನಲ್ಲಿ ಇದೇ ಮೊದಲು: ಡ್ರೋನ್ ಬಳಸಿ ಕೋವಿಡ್ ಲಸಿಕೆ ಸಾಗಣೆ
ನಗರದ ಚಂದಾಪುರ ಪ್ರಾಥಮಿಕ ಆರೋಗ್ಯ ಕೇಂದ್ರದಿಂದ ಆರು ಕಿಲೋ ಮೀಟರ್ ದೂರವಿರುವ ಆನೇಕಲ್ ನಲ್ಲಿರುವ ಹಾರಗದ್ದೆ ಸಾರ್ವಜನಿಕ ಆರೋಗ್ಯ ಕೇಂದ್ರಕ್ಕೆ ಡ್ರೋನ್ ಮೂಲಕ ವಿಶೇಷ ಕಂಟೇನರ್ ನಲ್ಲಿ ಕೋವಿಡ್ ಲಸಿಕೆಯ 50 ಬಾಟಲಿಗಳು ಮತ್ತು ಸಿರಿಂಜುಗಳನ್ನು ಯಶಸ್ವಿಯಾಗಿ ರವಾನಿಸಲಾಗಿದೆ.

ಇದೇ ಮೊದಲು: ಶೈತ್ಯೀಕರಿಸಿದ ಕಂಟೇನರ್ ಗಳಿರುವ ರೈಲಿನಲ್ಲಿ ವಿದೇಶದಿಂದ 1000 ಟನ್ ತಾಜಾ ಹಣ್ಣು ಬೆಂಗಳೂರಿಗೆ ಆಗಮನ
ಇದೇ ಮೊದಲ ಬಾರಿಗೆ ಭಾರತೀಯ ರೈಲ್ವೆ ವಿದೇಶದಿಂದ 1000 ಟನ್ ತಾಜಾ ಹಣ್ಣುಗಳನ್ನು ಶೈತ್ಯೀಕರಿಸಿದ ಕಂಟೇನರ್ ಗಳ ಮೂಲಕ ಬೆಂಗಳೂರಿಗೆ ತಲುಪಿಸಿದೆ.

ಪರೀಕ್ಷಾ ಸಂಬಂಧಿತ ವಸ್ತುಗಳನ್ನು ಸಾಗಿಸುವ ಸೇವೆ ಆರಂಭಿಸಲು ಅಂಚೆ ಇಲಾಖೆ ಚಿಂತನೆ
ಪರೀಕ್ಷಾ ಪ್ರಶ್ನೆ ಪತ್ರಿಕೆ ಹಾಗೂ ಉತ್ತರ ಪತ್ರಿಕೆಗಳಿಗೆ ಹೆಚ್ಚಿನ ಭದ್ರತೆ ಒದಗಿಸುವ ನಿಟ್ಟಿನಲ್ಲಿ ಪರೀಕ್ಷಾ ಸಂಬಂಧಿತ ವಸ್ತುಗಳನ್ನು ಸಾಗಿಸುವ ಸೇವೆ ಆರಂಭಿಸಲು ರಾಜ್ಯ ಅಂಚೆ ಇಲಾಖೆ ಚಿಂತನೆ ನಡೆಸಿದೆ. ಇದರಿಂದಾಗಿ ಇಲಾಖೆಗೂ ಹೆಚ್ಚಿನ ಆದಾಯ ಬರಲಿದೆ

ಹೃದಯ ನೀಡಿ ಸಾವಲ್ಲೂ ಸಾರ್ಥಕತೆ
ಕಳೆದ ವಾರವಷ್ಟೇ ಮೂರು ಜೀವಂತ ಹೃದಯಗಳ ಕಸಿ ಶಸ್ತ್ರಚಿಕಿತ್ಸೆ ಯಶಸ್ವಿಯಾಗಿ ನಡೆದ ಬೆನ್ನಲ್ಲೇ ನಗರದಲ್ಲಿ ಮತ್ತೊಂದು ಜೀವಂತ ಹೃದಯ ರವಾನೆಯಾಗಿದೆ. ಮೆದುಳು ನಿಷ್ಕ್ರಿಯಗೊಂಡಿದ್ದ ನಗರದ 17 ವರ್ಷದ ಯುವಕ ಸಾವಿನಲ್ಲೂ ಸಾರ್ಥಕತೆ ಮೆರೆದಿದ್ದು, ಐವರಿಗೆ ಹೊಸ ಬಾಳು ನೀಡಿದ್ದಾನೆ...

