ದೇಶಹಿಜ್ಬುಲ್ ಮುಖ್ಯಸ್ಥ ಸಲ್ಲಾಹುದ್ದೀನ್, ಭಟ್ಕಳದ ಸಹೋದರರು ಸೇರಿ 18 ಮಂದಿಯನ್ನು ಉಗ್ರರೆಂದು ಘೋಷಿಸಿದ ಮೋದಿ ಸರ್ಕಾರ
ಭಯೋತ್ಪಾದನೆ ವಿರೋಧಿ ಕಾನೂನಿನಡಿ ನಿಷೇಧಿತ ಹಿಜ್ಬುಲ್ ಮುಜಾಹಿದ್ದೀನ್ ಸಂಘಟನೆ ಮುಖ್ಯಸ್ಥ ಸೈಯದ್ ಸಲ್ಲಾಹುದ್ದೀನ್ ಮತ್ತು ಇಂಡಿಯನ್ ಮುಜಾಹಿದ್ದೀನ್ ಸಂಘಟನೆ ಸ್ಥಾಪಕರಾದ ಭಟ್ಕಳ ಸಹೋದರರು ಸೇರಿದಂತೆ 18 ಮಂದಿಯನ್ನು ಉಗ್ರರೆಂದು ಘೋಷಿಸಲಾಗಿದೆ ಎಂದು ಅಧಿಕೃತ ವಕ್ತಾರರು ಮಂಗಳವಾರ ತಿಳಿಸಿದ್ದಾರೆ.