ಸಲೀಂ

ಮಂಡ್ಯ ಮಗು ಸಾವಿನ ಬಳಿಕ ಎಚ್ಚೆತ್ತ ಪೊಲೀಸ್ ಇಲಾಖೆ: ಸಕಾರಣವಿಲ್ಲದೆ ವಾಹನ ತಡೆಯುವಂತಿಲ್ಲ; ಸಿಬ್ಬಂದಿಗೆ ಡಿಜಿಪಿ ಎಂ.ಎ ಸಲೀಂ ಖಡಕ್ ಸೂಚನೆ
ಮೇ 26 ರಂದು ಮಂಡ್ಯದಲ್ಲಿ ಟ್ರಾಫಿಕ್ ಪೊಲೀಸರು ಮಾಡಿದ ಯಡವಟ್ಟಿನಿಂದ ಮೂರುವರೆ ವರ್ಷದ ಮಗು ಸಾವನ್ನಪ್ಪಿತ್ತು.

ಲೋಕಸಭಾ ಚುನಾವಣೆ: ಫೆಬ್ರವರಿ ಅಂತ್ಯದ ವೇಳೆಗೆ ಕಾಂಗ್ರೆಸ್ ಅಭ್ಯರ್ಥಿಗಳ ಮೊದಲ ಪಟ್ಟಿ ಬಿಡುಗಡೆ- ಸಲೀಂ ಅಹಮ್ಮದ್
ಮುಂಬರುವ ಲೋಕಸಭಾ ಚುನಾವಣೆಗೆ ಸಿದ್ಧತೆಗಳು ಮುಂದುವರೆದಿದ್ದು, ಫೆಬ್ರವರಿ ಅಂತ್ಯದ ವೇಳೆಗೆ ಕಾಂಗ್ರೆಸ್ ಅಭ್ಯರ್ಥಿಗಳ ಮೊದಲ ಪಟ್ಟಿ ಬಿಡುಗಡೆಯಾಗಲಿದೆ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಸಲೀಂ ಅಹ್ಮದ್ ಅವರು ಭಾನುವಾರ ಹೇಳಿದರು.

ಏರೋ ಇಂಡಿಯಾ 2023: ನಗರದಲ್ಲಿ ಸುಗಮ ಸಂಚಾರದ ಭರವಸೆ ನೀಡಿದ ವಿಶೇಷ ಆಯುಕ್ತ ಸಲೀಂ
ದ್ವೈವಾರ್ಷಿಕ ವೈಮಾನಿಕ ಪ್ರದರ್ಶನ ಏರೋ ಇಂಡಿಯಾ 2023 ಸೋಮವಾರದಿಂದ ಆರಂಭವಾಗಲಿದ್ದು, ಈ ಹಿನ್ನೆಲೆಯಲ್ಲಿ ನಗರದ ಸಂಚಾರ ವಿಭಾಗದ ವಿಶೇಷ ಪೊಲೀಸ್ ಆಯುಕ್ತ ಸಲೀಂ ಅವರು, ಸುಗಮ ಸಂಚಾರದ ಭರವಸಯನ್ನು ನೀಡಿದ್ದಾರೆ.

10 ನಿಮಿಷ ಮೊದಲೇ ಮನೆಯಿಂದ ಹೊರಡಿ... ನೋ ಟೆನ್ಷನ್, ನೋ ಪ್ರೆಷರ್: ಜನತೆಗೆ ಹೊಸ ಮಂತ್ರ ನೀಡಿದ ಸಲೀಂ
ಸಂಚಾರ ದಟ್ಟಣೆಯಿಂದ ತತ್ತರಿಸುತ್ತಿರುವ ಬೆಂಗಳೂರಿನ ಚಿತ್ರಣವನ್ನು ಬದಲಾಯಿಸಲು ವಿಶೇಷ ಪೊಲೀಸ್ ಆಯುಕ್ತ (ಸಂಚಾರ) ಎಂಎ ಸಲೀಂ ಅವರನ್ನು ಸರ್ಕಾರ ಆಯ್ಕೆ ಮಾಡಿಕೊಂಡಿದೆ. ಅಧಿಕಾರ ವಹಿಸಿಕೊಂಡ ಕೆಲವೇ ವಾರಗಳಲ್ಲಿ 1993ರ ಬ್ಯಾಚ್‌ನ ಹಿರಿಯ ಐಪಿಎಸ್ ಅಧಿಕಾರಿ ನಗರದ ಪ್ರಮುಖ ರಸ್ತೆಗಳಲ್ಲಿ ಭಾರೀ ಸುಧಾರಣೆಗಳನ್ನು ತಂದಿದ್ದಾರೆ...

ಬೆಂಗಳೂರು: ವಾರಾಂತ್ಯದಲ್ಲಿ ದಿಢೀರ್ ಭೇಟಿ ನೀಡಿ ಸಂಚಾರ ಪರಿಸ್ಥಿತಿ ಪರಿಶೀಲಿಸಲು ವಿಶೇಷ ಆಯುಕ್ತರು ಮುಂದು!
ಟ್ರಾಫಿಕ್ ಜಾಮ್‌ಗೆ ಕಾರಣವಾಗುವ ರಸ್ತೆಗಳಲ್ಲಿ ಯಾವುದೇ ವಾಹನಗಳನ್ನು ನಿಲುಗಡೆ ಮಾಡದಂತೆ ಅಥವಾ ಅಡ್ಡಾದಿಡ್ಡಿಯಾಗಿ ನಿಲ್ಲಿಸದಂತೆ ಸಂಚಾರ ಪೊಲೀಸರಿಗೆ ವಿಶೇಷ ಸೂಚನೆ ನೀಡಿರುವ ವಿಶೇಷ ಆಯುಕ್ತ ಸಲೀಂ ಅವರು, ಸಂಚಾರ ಪರಿಸ್ಥಿತಿ ಪರಿಶೀಲಿಸಲು ವಾರಾಂತ್ಯದಲ್ಲಿ ಅನಿರೀಕ್ಷಿತ ಭೇಟಿ ನೀಡಲು ಮುಂದಾಗಿದ್ದಾರೆ.

ನಾಗರಿಕ ಸಂಚಾರ ವೇದಿಕೆ ಸಭೆ: ಅಧಿಕಾರಿಗಳ ಎದುರು ಸಮಸ್ಯೆಗಳ ಸುರಿಮಳೆಗೈದ ಜನತೆ!
ನೂತನವಾಗಿ ನೇಮಕಗೊಂಡ ವಿಶೇಷ ಆಯುಕ್ತ (ಸಂಚಾರ) ಎಂ.ಎ.ಸಲೀಂ ಅವರ ಉಪಕ್ರಮದ ನಾಗರಿಕ ಸಂಚಾರ ವೇದಿಕೆ ಸಭೆಗೆ ಶನಿವಾರ ಸಾರ್ವಜನಿಕರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಯಿತು.

ಸಂಚಾರ ದಟ್ಟಣೆ ಸಮಸ್ಯೆ: ಹೆಬ್ಬಾಳ-ಕೆಂಪಾಪುರ ಜಂಕ್ಷನ್'ಗೆ ವಿಶೇಷ ಆಯುಕ್ತ ಭೇಟಿ, ಪರಿಶೀಲನೆ
ಮಂಗಳವಾರ ಅಧಿಕಾರ ಸ್ವೀಕರಿಸಿದ ವಿಶೇಷ ಆಯುಕ್ತ (ಸಂಚಾರ) ಎಂ.ಎ.ಸಲೀಂ ಅವರು ಬುಧವಾರ ಜನನಿಬಿಡ ಪ್ರದೇಶವಾಗಿರುವ ಹೆಬ್ಬಾಳ ಮೇಲ್ಸೇತುವೆ ಮತ್ತು ಕೆಂಪಾಪುರ ಜಂಕ್ಷನ್‌ಗೆ ಭೇಟಿ ನೀಡಿ, ಪರಿಶೀಲನೆ ನಡೆಸಿದರು.

ಡಿಕೆ ಶಿವಕುಮಾರ್ ನನಗೆ ಗಾಡ್ ಫಾದರ್, ಅವರಿಗೆ ಕೈ ಮುಗಿದು ಕ್ಷಮೆ ಕೋರುತ್ತೇನೆ: ಸಲೀಂ
ಕೆಪಿಸಿಸಿಯಿಂದ ಆರು ವರ್ಷಗಳ ಕಾಲ ಉಚ್ಛಾಟನೆಗೊಂಡಿರುವ ಎಂ.ಎ. ಸಲೀಂ ಅವರು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರಿಗೆ ಗುರುವಾರ ಕೈಮುಗಿದು ಕ್ಷಮೆ ಕೋರಿದ್ದಾರೆ.

'ಡಿಕೆಶಿ ದೊಡ್ಡ ಡೀಲ್ ಗಿರಾಕಿ, ಕೋಟಿ-ಕೋಟಿ ಡೀಲ್ ನಡೆಸುತ್ತಾರೆ': ಕೆಪಿಸಿಸಿ ಅಧ್ಯಕ್ಷರ ವಿರುದ್ಧ ಕಚೇರಿಯಲ್ಲೇ 'ಕೈ' ನಾಯಕರ ಗುಸು-ಗುಸು!
ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ಅವರಿಂದ ಕೋಟಿ ಕೋಟಿ ಡೀಲ್ ನಡೆಯುತ್ತದೆ, ಡಿಕೆ ಶಿವಕುಮಾರ್ ದ್ದು ದೊಡ್ಡ ಸ್ಕ್ಯಾಮ್, ಕಲೆಕ್ಷನ್, ಡೀಲ್ ಗಿರಾಕಿ, ಡಿಕೆಶಿ ಹುಡುಗರ ಬಳಿ 50 ರಿಂದ 100 ಕೋಟಿ ರೂಪಾಯಿ ಇದೆ ಅಂದ ಮೇಲೆ ಇವರ ಬಳಿ ಎಷ್ಟಿರಬೇಡ ಎಂದು ಕಾಂಗ್ರೆಸ್ ನ ಇಬ್ಬರು ಪ್ರಮುಖ ನಾಯಕರು ವೇದಿಕೆಯಲ್ಲಿ ಮಾತನಾಡಿಕೊಂಡಿದ್ದಾರೆ.

