ಸಲಾಂ ಆರತಿ

‘ಸಲಾಂ ಆರತಿ’ ಹೆಸರು ಬದಲಿಸುವ ನಿರ್ಧಾರ ಸರಿಯಾಗಿದೆ: ಗೃಹ ಸಚಿವ ಆರಗ ಜ್ಞಾನೇಂದ್ರ
ಯಾವುದೋ ಗುಲಾಮಿ ಪರಿಸ್ಥಿತಿಯಲ್ಲಿ ಸಲಾಂ ಆರತಿ ಪದ್ಧತಿ ಚಾಲ್ತಿಗೆ ಬಂದಿತ್ತು. ಈಗ ಅಂತಹ ಪದ್ಧತಿ ಬದಲಾಗಬೇಕು. ಕನಿಷ್ಠ ನಮ್ಮ ದೇವಾಲಯಗಳಲ್ಲಿ ಸಾಂಸ್ಕೃತಿಕ ನೆಲೆಗಟ್ಟು ಗಟ್ಟಿಗೊಳಿಸದಿದ್ದಲ್ಲಿ ಮತ್ತೆ ಎಲ್ಲಿ ಆಗೋದು ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ಪ್ರಶ್ನೆ ಮಾಡಿದ್ದಾರೆ.

ರಾಜ್ಯದ ದೇವಾಲಯಗಳಲ್ಲಿ ಸೇವಾ ಕಾರ್ಯಗಳಿಗೆ ಬಳಸುವ ಹೆಸರು ಬದಲಾವಣೆಗೆ ನಿರ್ಧಾರ: ಶಶಿಕಲಾ ಜೊಲ್ಲೆ
ಸಲಾಂ ಆರತಿ” ಮತ್ತು “ಸಲಾಂ ಮಂಗಳಾರತಿ” ಪೂಜಾಕಾರ್ಯಗಳ ಹೆಸರನ್ನು ಬದಲಾಯಿಸುವ ಬಗ್ಗೆ ವಿಸ್ತ್ರತವಾಗಿ ಚರ್ಚಿಸಲಾಗಿದೆ. ಈ ಪೂಜಾಕಾರ್ಯಗಳ ಹೆಸರನ್ನು ಸ್ಥಳೀಯ ಭಾಷೆಯ ಪದಗಳಿಗೆ ಬದಲಿಸುವ ಬಗ್ಗೆ ಮಾತ್ರ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಧಾರ್ಮಿಕ , ಹಜ್ ಮತ್ತು ವಕ್ಫ್ ಸಚಿವೆ ಶಶಿಕಲಾ ಜೊಲ್ಲೆ ಹೇಳಿದ್ದಾರೆ.

