ದೇಶಮಧ್ಯಪ್ರದೇಶ: ಆದಾಯಕ್ಕಿಂತ ಅಧಿಕ ಆಸ್ತಿ; ಶೋಧ ನಡೆಸುವ ವೇಳೆ ವಿಷ ಕುಡಿದ ರಾಜ್ಯ ಸರ್ಕಾರದ ಗುಮಾಸ್ತ
ಆದಾಯಕ್ಕಿಂತ ಅಧಿಕ ಆಸ್ತಿ ಹೊಂದಿದ್ದ ಆರೋಪದ ಮೇರೆಗೆ ಮಧ್ಯಪ್ರದೇಶ ಪೊಲೀಸ್ ಆರ್ಥಿಕ ಅಪರಾಧ ವಿಭಾಗ (EOW) ಶೋಧ ಕಾರ್ಯ ನಡೆಸುತ್ತಿರುವ ವೇಳೆ ವಿಷವನ್ನು ಸೇವಿಸಿದ ಸರ್ಕಾರಿ ಗುಮಾಸ್ತರೊಬ್ಬರ ಮನೆಯಿಂದ 85 ಲಕ್ಷಕ್ಕೂ ಅಧಿಕ ಹಣವನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.