ಸತ್ಯಾಗ್ರಹ

ಪರೀಕ್ಷಾ ಅಕ್ರಮಗಳ ವಿರುದ್ಧ ಕಾಂಗ್ರೆಸ್ ನಾಳೆ ದೇಶಾದ್ಯಂತ ಮೊಂಬತ್ತಿ ಮೆರವಣಿಗೆ, ಸತ್ಯಾಗ್ರಹ!
ಬೃಹತ್ ಮೊಂಬತ್ತಿ ಮೆರವಣಿಗೆ ಹಾಗೂ 'ಸತ್ಯಾಗ್ರಹ'ವನ್ನು ಆಯೋಜಿಸಲು ನಿರ್ದೇಶಿಸುವಂತೆ ಎಲ್ಲಾ ಪ್ರದೇಶ ಕಾಂಗ್ರೆಸ್ ಸಮಿತಿ ಅಧ್ಯಕ್ಷರಿಗೆ ಕಳುಹಿಸಲಾದ ಸುತ್ತೋಲೆಯಲ್ಲಿ ತಿಳಿಸಲಾಗಿದೆ.

ಕೊಡಗಿಗೆ ಭೌಗೋಳಿಕ ಸ್ವಾಯತ್ತತೆ ನೀಡುವಂತೆ ಒತ್ತಾಯಿಸಿ ಸತ್ಯಾಗ್ರಹ
ಕೊಡಗಿಗೆ ಭೌಗೋಳಿಕ ಸ್ವಾಯತ್ತತೆ ನೀಡುವುದರ ಜೊತೆಗೆ ಕೊಡವ ಸಮುದಾಯದ ಹಕ್ಕುಗಳನ್ನು ಎತ್ತಿಹಿಡಿಯುವುದು ಸೇರಿದಂತೆ ಹಲವಾರು ಬೇಡಿಕೆಗಳನ್ನು ಈಡೇರಿಸುವಂತೆ ವೇದಿಕೆಯು ಒತ್ತಾಯಿಸಿತು.

ತುಮಕೂರು: ಕುಲಾಂತರಿ ತಳಿಯ ಬೆಳೆ ವಿರುದ್ಧ ರೈತರ ಸತ್ಯಾಗ್ರಹ
ಬಯೋ ಟೆಕ್ನಾಲಜಿ ಹಾಗೂ ಕುಲಾಂತರಿ ತಳಿಗಳ ಸಂಶೋಧನೆಗೆ ಸರ್ಕಾರ ನೆರವು ನೀಡುವುದನ್ನು ನಿಲ್ಲಿಸಬೇಕು. ಕಾರ್ಪೊರೇಟ್ ಕಂಪನಿಗಳು ಇಂತಹ ಕಾರ್ಯಗಳಿಗೆ ಹಣಕಾಸಿನ ನೆರವು ನೀಡದಂತೆ ತಡೆಯೊಡ್ಡಬೇಕು.

ಕಾಂಗ್ರೆಸ್ ನಡೆಸುತ್ತಿರುವುದು ಸತ್ಯಾಗ್ರಹ ಅಲ್ಲ, ದುರಾಗ್ರಹ: ಕೈ ಪಾಳಯದ ವಿರುದ್ಧ ಬಿಜೆಪಿ ವಾಗ್ದಾಳಿ
ಕಾಂಗ್ರೆಸ್ ವಿರುದ್ಧ ಬಿಜೆಪಿ ತೀವ್ರ ವಾಗ್ದಾಳಿ ನಡೆಸಿದ್ದು, ಭಾನುವಾರದಂದು ಕೈ ಪಾಳಯ ನಡೆಸುತ್ತಿರುವ ಸತ್ಯಾಗ್ರಹವನ್ನು ದುರಾಗ್ರಹ ಎಂದು ಕರೆದಿದೆ. ರಾಹುಲ್ ಗಾಂಧಿ ಅವರನ್ನು ಸಂಸತ್ತಿನಿಂದ ಅನರ್ಹಗೊಳಿಸಿರುವುದನ್ನು ವಿರೋಧಿಸಿ ಕಾಂಗ್ರೆಸ್ ದೆಹಲಿಯ ರಾಜ್‌ಘಾಟ್‌ನಲ್ಲಿ 'ಸಂಕಲ್ಪ ಸತ್ಯಾಗ್ರಹ' ನಡೆಸುತ್ತಿದೆ.

ಸಂಸದ ಸ್ಥಾನದಿಂದ ರಾಹುಲ್ ಗಾಂಧಿ ಅನರ್ಹ: ರಾಜ್‌ಘಾಟ್‌ನಲ್ಲಿ ಕಾಂಗ್ರೆಸ್ ಸತ್ಯಾಗ್ರಹ, ಖರ್ಗೆ, ಪ್ರಿಯಾಂಕಾ ಗಾಂಧಿ ಭಾಗಿ
ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಯವರನ್ನು ಸಂಸದ ಸ್ಥಾನದಿಂದ ಅನರ್ಹಗೊಳಿಸಿದ್ದನ್ನು ವಿರೋಧಿಸಿ ರಾಜ್‌ಘಾಟ್‌ನಲ್ಲಿ ಕಾಂಗ್ರೆಸ್ ನಾಯಕರು ಭಾನುವಾರ ಸತ್ಯಾಗ್ರಹ ಆರಂಭಿಸಿದ್ದು, ಸತ್ಯಾಗ್ರಹದಲ್ಲಿ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಪ್ರಿಯಾಂಕಾ ಗಾಂಧಿ ಸೇರಿದಂತೆ ಹಲವು ನಾಯಕರು ಭಾಗಿಯಾಗಿದ್ದಾರೆ.

ರಾಹುಲ್ ಗಾಂಧಿ ಅನರ್ಹತೆ ವಿರುದ್ಧ ಕಾಂಗ್ರೆಸ್ ದೇಶದಾದ್ಯಂತ ಸತ್ಯಾಗ್ರಹ, ಅನುಮತಿ ನಿರಾಕರಿಸಿದ ದೆಹಲಿ ಪೊಲೀಸರು
ರಾಹುಲ್ ಗಾಂಧಿ ಅವರನ್ನು ಲೋಕಸಭೆ ಸದಸ್ಯ ಸ್ಥಾನದಿಂದ ಅನರ್ಹಗೊಳಿಸಿರುವುದನ್ನು ವಿರೋಧಿಸಿ ಕಾಂಗ್ರೆಸ್ ಭಾನುವಾರ ಎಲ್ಲಾ ರಾಜ್ಯಗಳು ಮತ್ತು ಜಿಲ್ಲಾ ಕೇಂದ್ರಗಳಲ್ಲಿನ ಗಾಂಧಿ ಪ್ರತಿಮೆಗಳ ಮುಂದೆ ಒಗ್ಗಟ್ಟಿನಿಂದ ಒಂದು ದಿನದ ಸತ್ಯಾಗ್ರಹವನ್ನು ಆಯೋಜಿಸಲಿದೆ.

ಸತ್ಯಾಗ್ರಹ ಅಹಂಕಾರವನ್ನು ಸೋಲಿಸಿತು: 3 ಕೃಷಿ ಮಸೂದೆಗಳ ರದ್ದು ಕುರಿತು ರಾಹುಲ್ ಗಾಂಧಿ
ಅನ್ನದಾತರ ಸತ್ಯಾಗ್ರಹವು ಅಹಂಕಾರವು ತಲೆ ತಗ್ಗಿಸುವಂತೆ ಮಾಡಿದೆ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಯವರು ಶುಕ್ರವಾರ ಹೇಳಿದ್ದಾರೆ.

ಸಂವಿಧಾನದ ಮೇಲೆ ದಾಳಿ ಮಾಡಲು ಜನರು ಬಿಡಲ್ಲ: ಮೋದಿ ವಿರುದ್ಧ ರಾಹುಲ್ ವಾಗ್ದಾಳಿ
ಪ್ರಧಾನಿ ನರೇಂದ್ರ ಮೋದಿ ದ್ವೇಷವನ್ನು ಹರಡಲು ಹಾಗೂ ದೇಶವನ್ನು ಒಡೆಯಲು ಪ್ರಯತ್ನಿಸುತ್ತಿದ್ದಾರೆ ಆದರೆ, ಅವರು ಸಂವಿಧಾನದ ಮೇಲೆ ದಾಳಿ ಮಾಡಲು, ಭಾರತ ಮಾತೆಯ ಧ್ವನಿಯನ್ನು ಅಡಗಿಸಲು ಜನರು ಅವಕಾಶ ಮಾಡಿಕೊಡಲ್ಲ ಎಂದು ಕಾಂಗ್ರೆಸ್ ಮಾಜಿ ಅಧ್ಯಕ್ಷ ರಾಹುಲ್ ಗಾಂಧಿ ಗುಡುಗಿದ್ದಾರೆ

ಉಪವಾಸ ಸತ್ಯಾಗ್ರಹ: ರಾಜ್ ಘಾಟ್ ನಿಂದ ಹೊರಹೋಗುವಂತೆ ಟೈಟ್ಲರ್ ಗೆ ಹೇಳಿದ 'ಕೈ' ನಾಯಕರು
ಪ್ರಧಾನಿ ನರೇಂದ್ರಮೋದಿಸರ್ಕಾರ ಹಾಗೂ ಸಂಸತ್ತಿನ ಬಜೆಟ್ ಅಧಿವೇಶನ ವ್ಯರ್ಥಗೊಂಡಿದ್ದನ್ನು ವಿರೋಧಿಸಿ ರಾಜ್ ಘಟ್ ಬಳಿ ಕಾಂಗ್ರೆಸ್ ಪಕ್ಷದ ಅಧ್ಯಕ್ಷ ರಾಹುಲ್ ಗಾಂಧಿ ನೇತೃತ್ವದಲ್ಲಿ ಒಂದು ದಿನದ ಉಪವಾಸ ಸತ್ಯಾಗ್ರಹ ನಡೆಸುತ್ತಿದೆ.

