ರಾಜ್ಯಸರ್ಕಾರದ ಕೋವಿಡ್ ಲಸಿಕೆ ಪೂರೈಕೆ ನೀತಿ: ಸಣ್ಣ ಮತ್ತು ಮಧ್ಯಮ ಗಾತ್ರದ ಆಸ್ಪತ್ರೆಗಳಲ್ಲಿ ಲಸಿಕೆ ಕೊರತೆ
ಕೋವಿಡ್-19 ಅಲೆಯಲ್ಲಿ ಪ್ರಮುಖ ಪಾತ್ರ ವಹಿಸಿರುವ ಸಣ್ಣ ಮತ್ತು ಮಧ್ಯಮ ಗಾತ್ರದ ಆಸ್ಪತ್ರೆಗಳನ್ನು ಕೊರೋನಾ ಲಸಿಕೆ ಅಭಿಯಾನದಿಂದ ಹೊರಗಿಡಲಾಗಿದೆ. ಪೂರೈಕೆದಾರರಿಂದ ಕೊರೋನಾ ಲಸಿಕೆ ಡೋಸ್ ಗಳನ್ನು ಸಂಗ್ರಹಿಸಲು ಸಾಧ್ಯವಾಗದಿರುವುದರಿಂದ 30ರಿಂದ 40 ಬೆಡ್ ಗಳನ್ನು ಹೊಂದಿರುವ ಆಸ್ಪತ್ರೆಗಳು ಲಸಿಕೆ ಅಭಿಯಾನವನ್ನು ನಡೆಸುವ ಕಾರ್ಯದಿಂದ ಹೊರಗುಳಿದಿವೆ.